Ticker

6/recent/ticker-posts

ಬಿಜೆಪಿ ಚಿಕ್ಕಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಮಂಡಲದಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಚಾಲನೆ ಕಾರ್ಯಕ್ರಮ*


ಚಿಕ್ಕಬಳ್ಳಾಪುರ  . ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಗರಮಂಡಲದಲ್ಲಿ ನರೇಂದ್ರ ಮೋದಿಜೀ 2ನೇ ಅವದಿ ಒಂದುವರ್ಷ ಪೂರ್ಣಗೊಂಡಿದ್ದು   ನಮ್ಮ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಸಾದನೆ ತಿಳಿಸಲು ಮನೆ ಮನೆ ಸಂಪರ್ಕ ಅಭಿಯಾನವನ್ನು ಚಿಕ್ಕಬಳ್ಳಾಪುರ  ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ ನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿ ಬೂತ್ ನಲ್ಲಿ ಕಾರ್ಯಕರ್ತರು  ಕನಿಷ್ಠ ನೂರು ಮನೆಗಳಿಗೆ ಕೇಂದ್ರ ಸರ್ಕಾರದ ಜನಪರ ಯೋಜನೆ ಮತ್ತು  ಸಾದನೆಗಳನ್ನು ತಿಳಿಸಿ ಕರಪತ್ರಗಳನ್ನು ನೀಡಬೇಕಾಗಿ ಕಾರ್ಯಕರ್ತರಲ್ಲಿ ಕೋರಿದರು.
ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷರ ಡಾllಜಿ.ವಿ‌.ಮಂಜುನಾಥ್,ಮಾಜಿ ಕೋಮುಲ್ ಅಧ್ಯಕ್ಷ ರಾದ ಕೆ.ವಿ.ನಾಗರಾಜ್, ಸಂಪರ್ಕ ಅಭಿಯಾನ ಜಿಲ್ಲಾ ಸಂಯೋಜಕರಾದ ನಾಗಭೂಷಣ್ ಮತ್ತು ಜಿಲ್ಲಾ ಕಾರ್ಯದರ್ಶಿ ಅಶೋಕ್, ನಗರಮಂಡಲ ಅಧ್ಯಕ್ಷ ಶ್ರೀನಿವಾಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೃಷ್ಣ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಲಗುರ್ಕಿ ಶ್ರೀನಿವಾಸ್ ರೆಡ್ಡಿ ಮತ್ತು ಮರಳಕುಂಟೆ ಕೃಷ್ಣ ಮೂರ್ತಿ,ರಾಷ್ಟೀಯ ಪರಿಷತ್‌ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತಾ 1ನೇ ವಾರ್ಡಿನ ಶಶಿಶೇಖರ್,ಮಾಜಿನಗರಸಭೆ ಸದಸ್ಯರಾದ  ಬಿ.ಎಲ್.ಕೇಶವ ಕುಮಾರ್, ಮುಖಂಡರಾದ ಕೆ.ಎಲ್.ಸುರೇಷ್,ನರೇಂದ್ರ, ಲಕ್ಷಿಪತಿ,ರಾಮಣ್ಣ, ಎಸ್.ಆರ್.ಎಸ್. ದೇವರಾಜ್,ಮೊಬೈಲ್ ಬಾಬು,ಜಿಲ್ಲಾ ಮಾಧ್ಯಮ ಪ್ರಮುಖ್ ಮಧುಚಂದ್ರ. ವಿ ಹಾಗೂ ನಗರ ಎಲ್ಲಾ ವಾರ್ಡಿನ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದರು.