Ticker

6/recent/ticker-posts

ಹುಟ್ಟು ಹಬ್ಬವನ್ನು ಗಿಡನೆಡುವ ಮೂಲಕ ಆಚರಣೆ ಮಾಡಿ:-ಗ್ರೇಡ್ -2 ತಹಸೀಲ್ದಾರ್ ಸಿಗ್ಬತುಲ್ಲಾ*



ಚಿಕ್ಕಬಳ್ಳಾಪುರ ಗುಡಿಬಂಡೆ:-  ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಕಾರಣಕ್ಕೆ ಪರಿಸರ ಸಂರಕ್ಷ ಣೆಯ ಜವಾಬ್ದಾರಿ ಕಡೆಗಣಿಸಲಾಗುತ್ತಿದೆ ,ಹಾಗಾಗಿ ಯಾವುದೇ ವಿಶೇಷತೆ ಇದ್ದರೂ ಗಿಡ ನೆಡುವ ಮೂಲಕ ಆಚರಿಸಬೇಕು ಎಂದು   ಗ್ರೇಡ್ -2  ತಹಸೀಲ್ದಾರ್ ಸಿಗ್ಬತುಲ್ಲಾ ತಿಳಿಸಿದರು,
ತಾಲೂಕು ಕಚೇರಿ ಮುಂಭಾಗದ ಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯ  ಟಿ,ಎ ನಾರಾಯಣ ಗೌಡ ರವರ  54 ನೇ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಲಾತ್ತು,
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆನಂದ ನಾರಾಯಣಗೌಡ ಹುಟ್ಟು ಹಬ್ಬದ ಶುಭಾಶಯ ಹೇಳುವ ಮೂಲಕ ಆಚರಿಸಲಾಗುತ್ತಿದೆ ಅವರಿಗೆ ದೇವರು ಆರೋಗ್ಯವನ್ನು ನೀಡಿ ನಮ್ಮ  ಕರ್ನಾಟಕ ರಕ್ಷಣಾ ವೇದಿಕೆ ಬೆಳವಣಿಗೆಯಾಗಲು ಇನ್ನು ಶ್ರಮಿಸುತ್ತೇವೆ ಎಂದು ಅವರು ತಿಳಿಸಿದರು ,
ಕಾರ್ಯಕ್ರಮದಲ್ಲಿ -  ಗ್ರೇಡ್ -2 ತಹಸೀಲ್ದಾರ್ ಸಿಗ್ಬತುಲ್ಲಾ,ಕರ್ನಾಟಕ ರಕ್ಷಣಾ ವೇದಿಕೆ ಆನಂದ್,ಶಿಕ್ಷಕರು ನಾರಾಯಣಸ್ವಾಮಿ , ಖಜಾಂಚಿ  ಶ್ರೀನಿವಾಸ್ ಯಾದವ್,ಲಕ್ಷ್ಮಿಪತಿ ಮುಂತಾದವರು ಹಾಜರಿದ್ದರು.