Ticker

6/recent/ticker-posts

ಕಾರ್ಯದರ್ಶಿ ಸ್ಥಾನಕ್ಕೆ ಕಚ್ಚಾಡುತ್ತಿರುವ ಕಣಿತಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು.



ಚಿಕ್ಕಬಳ್ಳಾಪುರ: ತಾಲೂಕಿನ ಹೊರವಲಯದಲ್ಲಿರುವ ಕಣಿತಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ 40 ವರ್ಷಗಳಿಂದ ನಂಜಪ್ಪ ಎಂಬುವವರು ಕೆಲಸ ನಿರ್ವಹಿಸುತ್ತಾ ಬಂದಿದ್ದು,

ಈಗ ಅವರು ನಿವೃತ್ತಿ ಆದ ಬಳಿಕ ಅಲ್ಲಿರುವ ಸದಸ್ಯರು ಕಾರ್ಯದರ್ಶಿ ಸ್ಥಾನಕ್ಕೆ ಯಾರಿಗೂ ಗೊತ್ತಿಲ್ಲದೆ ಕೆಲವರ ರಾಜಕೀಯ ವ್ಯಕ್ತಿಗಳಿಂದ ಆ ಸ್ಥಾನವನ್ನು ಗಳಿಸಬೇಕು ಎಂದು ಅಲ್ಲಿರುವ ಸದಸ್ಯರು ಕಚ್ಚಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಕಣಿತಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ನಂಜಪ್ಪ ಅವರು 40 ವರ್ಷಗಳಿಂದ ಕಾರ್ಯವನ್ನು ನಿರ್ವಹಿಸಿಕೊಂಡು ಬಂದಿದ್ದು ಇದೀಗ ಅವರು ನಿವೃತ್ತ ಹೊಂದ ಬಳಿಕ ಅವರು ಯಾವುದೇ ಜವಾಬ್ದಾರಿಯು ಯಾರಿಗೂ ಕೊಟ್ಟಿಲ್ಲ,

ಆದರೆ ಅಲ್ಲಿ ಇರುವಂತಹ ಸದಸ್ಯರು ನೋಟಿಸ್ ಬೋರ್ಡ್ ಇಲ್ಲದೆ ಹಾಗೂ ಯಾವುದೇ ತರದ ಅರ್ಜಿಗಳು ಸ್ವೀಕರಿಸದೆ ಇಲ್ಲದೆ ರಾಜಕೀಯ ವ್ಯಕ್ತಿಗಳು ಇಂದ ಕಾರ್ಯದರ್ಶಿ ಸ್ಥಾನವನ್ನು ಗಳಿಸಬೇಕು ಎಂದು ಪ್ರಯತ್ನಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಕಣಿತಹಳ್ಳಿ ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾಗಿರುವ ರಮೇಶ್ ರವರು ಮಾತನಾಡಿ ಇಲ್ಲಿರುವಂತಹ ಕಾರ್ಯದರ್ಶಿಯೂ ನಿವೃತ್ತಿ ಪಡೆದಿದ್ದು ಅರ್ಜಿಗಳನ್ನು ಹಾಕಲು ಯಾವುದೇ ತರ ನೋಟಿಸ್ ಇಲ್ಲ.

ಹಾಗೆಯೇ ಕಾರ್ಯದರ್ಶಿ ಹುದ್ದೆಗೆ ಅರ್ಜಿಗಳನ್ನು ಕೊಟ್ಟರೂ ಸಹ ತೆಗೆದುಕೊಳ್ಳುತ್ತಿಲ್ಲ, ಅಲ್ಲಿ ಹೊಸ ಕಾರ್ಯದರ್ಶಿಯನ್ನು ನೆನೆಸಿಕೊಳ್ಳೋದಕ್ಕೆ ಪಾಲಿಸಬೇಕಾದ ಸರ್ಕಾರಿ ಆದೇಶಗಳು ಪಾಲನೆ ಇಲ್ಲ. ಅಲ್ಲಿ ಇರುವಂತಹ ಹಾಲು ಪರೀಕ್ಷ ಕರನ್ನು ಕಾರ್ಯದರ್ಶಿಯಾಗಿ ಮಾಡಬೇಕೆಂದು ಪ್ರಯತ್ನ ಪಡುತ್ತಿದ್ದಾರೆ.

ಅವರು ಬರಿ ಎಸ್ ಎಸ್ ಎಲ್ ಸಿ ಆಗಿರುವುದರಿಂದ ಅವರು ಕೆಲವು ರಾಜಕೀಯ ವ್ಯಕ್ತಿಗಳಿಂದ ಆ ಸ್ಥಾನವನ್ನು ಕಳಿಸಬೇಕು ಎಂದು ಪ್ರಯತ್ನ ಪಡುತ್ತಾರೆ. ಆದರೆ ಸರ್ಕಾರದ ಆದೇಶದಂತೆ ಕಾರ್ಯದರ್ಶಿ ಸ್ಥಾನಕ್ಕೆ ಬಿಎ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು

ಈ ಪದವಿಯನ್ನು ಅವರೇ ಪಡೆದಿದ್ದಾರೆ ಅವರು ಈ ಸ್ಥಾನ ತೆಗೆದುಕೊಳ್ಳುವುದಕ್ಕೆ ನಮಗೇನು ಅಭ್ಯಂತರವಿಲ್ಲ. ಆದರೆ ಹಂಗಾಮಿಯಾಗಿ ಆ ಕೆಲಸವನ್ನು ಮಾಡುತ್ತೇನೆ ಎ�