Ticker

6/recent/ticker-posts

ಕೃಷ್ಣರಾಜಪೇಟೆ : ಮೊನ್ನೆ ಸುರಿದ ಮಳೆಯಿಂದಾಗಿ ನೆಲಕೊರುಳಿದ ಮನೆ...



ಮೊನ್ನೆ ಸುರಿದ ಮಳೆಯಿಂದಾಗಿ ನೆಲಕೊರುಳಿದ ಮನೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಉದ್ದಿನಮಲ್ಲ ಹೊಸೂರು ಗ್ರಾಮದ ಶೇಖರ್ ಮತ್ತು ಶಿವೇಗೌಡ ರವರಿಗೆ ಸೇರಿದ ಮನೆ.

ಮಂಗಳವಾರ ಸಂಜೆ ಸುರಿದ ದಾರಾಕಾರ ಮಳೆಗೆ ಶೀತಗೊಂಡ ಮನೆ ನೆನ್ನೆ   ರಾತ್ರಿ ವೇಳೆ ಚಾವಣಿ ಸಮೇತ ಬಿದ್ದು ಹೋಗಿದ್ದು ಎರಡು ಕುಟುಂಬಗಳು ಬೀದಿ ಪಾಲಾಗಿದ್ದು ಯಾವುದೇ ಪ್ರಾಣ ಹಾನಿ  ಘಟನೆ ಸಂಭವಿಸಿಲ್ಲ.

ರಾತ್ರಿ ವೇಳೆ ಸಲ್ಪ ಮಟ್ಟದ ಮನೆ ಕುಸಿದಿದ್ದು ಇದರಿಂದ ಎಚ್ಚರಕೊಂಡ ಶೇಖರ್ ಮತ್ತು ಶಿವೇಗೌಡ,  ಕುಟುಂಬದ ಅಕ್ಕಪಕ್ಕದ ಸಾರ್ವಜನಿಕರ ಸಹಾಯದಿಂದ ದನಕರು ಗಳು ಹಾಗೂ ಕುರಿ ಮೇಕೆ, ಮಕ್ಕಳುಗಳನ್ನು ರಕ್ಷಿಸಿಕೊಂಡಿದ್ದಾರೆ.

ತೀರ ಕಡು ಬಡ ಕುಟುಂಬ ಕೂಲಿ ನಾಲಿ ಮಾಡಿಕೊಂಡು ಜೀವನ ನೆಡೆಸುತ್ತಿದ್ದು ಎರಡು ಕುಟುಂಬದವರು  ಮನೆ ಕಳೆದುಕೊಂಡು ಬೀದಿ ಬಿದ್ದಿದ್ದು ಇವರಿಗೆ ಸರ್ಕಾರದಿಂದ ಸೂಕ್ತ ಪರಿಯಾರ ಹಾಗೂ ಮನೆ ನಿರ್ಮಿಸಿಕೊಂಡುವಂತೆ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ  ವನಜಾಕ್ಷಿ ಮಂಜೇಗೌಡ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.