Ticker

6/recent/ticker-posts

ಚಿಕ್ಕಬಳ್ಳಪುರ ನಗರ ಪ್ರದೇಶದ ಸ್ವಚ್ಛತೆಕಾಪಡಲು ಮನವಿ..


ನಮ್ಮ ಪ್ರತಿನಿಧಿ ಎಂ ಆನಂದ್. ಚಿಕ್ಕಬಳ್ಳಾಪುರ: ನಗರದ ಎಂ.ಜಿ.ರಸ್ತೆಯು ಕಸವನ್ನು  ತುಂಬಿಸಿಕೊಳ್ಳುವ ಅಥವಾ ಡಂಪಿಂಗ್ ಮಾಡಿಕೊಳ್ಳುವ ಪ್ರದೇಶವಾಗಿ ಮಾರ್ಪಟ್ಟಿದೆ. ನಗರದ ಬಹುತೇಕ ರಸ್ತೆಗಳು ಈಗಾಗಲೇ ತೀವ್ರವಾಗಿ ಹದಗೆಟ್ಟಿದೆ ಮತ್ತು ಸ್ವಚ್ಛತೆಯನ್ನು ಕಾಣದ ನಗರವಾಗಿ ಮಾರ್ಪಟ್ಟಿರುವ ಕಾರಣ. ಇದೆಲ್ಲ ಸಾಲದೆಂಬಂತೆ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ. ನಗರದ ಬಾವುಥೇಕ ಪ್ರದೇಶಗಳು ಸೇರಿದಂತೆ ಅದರಲ್ಲಿಯೂ ಎಂ.ಜಿ ರಸ್ತೆಯಂತೂ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.

ಈ ಅವ್ಯವಸ್ಥೆಗಳ ಬಗ್ಗೆ ಸುಮಾರು ಐದಾರು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರದ ಕಾಂಗ್ರೆಸ್ ನಾಯಕರು ಸೇರಿದಂತೆ ಜಿಲ್ಲಾಧಿಕಾರಿ ಆರ್.ಲತಾ ರವರಿಗೆ ರಸ್ತೆ ದುರಸ್ತಿ ಬಗ್ಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಬಂದಿದ್ದರೂ. ಯಾವುದೇ ಪ್ರಯೋಜನವಿಲ್ಲ ಹಾಗೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅದರ ಸಂಬಂಧವಾಗಿ ಕಾಂಗ್ರೆಸ್ ನಾಯಕರು ಮತ್ತು ಸಾರ್ವಜನಿಕ ವಲಯ ಅಭಿವೃದ್ಧಿಯ ದೃಷ್ಟಿಯಲ್ಲಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂಬ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತಿದ್ದಂತೆಹೆ.

ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅದರಲ್ಲಿಯೂ ಯಾವ ರೀತಿ ಎಂದರೆ ಜಲ್ಲಿ ಮತ್ತು ಗಟ್ಟಿ ಮಣ್ಣಿನಿಂದ ರಸ್ತೆಯ ಬದಿಗಳನ್ನು ಹಸನು ಮಾಡಬೇಕಾಗಿದ್ದ ಅಧಿಕಾರಿಗಳು. ಆದರೆ ಇಂದೀಗ ನಗರದ ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿರುವ ಕಸವನ್ನು ಟ್ರಾಕ್ಟರ್ ಮೂಲಕ ಹಳ್ಳಗಳನ್ನು ಮುಚ್ಚುವ ನೆಪದಲ್ಲಿ ದುರ್ವಾಸನೆಯಿಂದ ಕೂಡಿರುವ ಪ್ಲಾಸ್ಟಿಕ್ ಕವರ್. ಕಸ ಕಡ್ಡಿಯನ್ನು ತಂದು ರಸ್ತೆಯಲ್ಲಿ ಸುರಿಯುತ್ತಿದ್ದಾರೆ.

ಇದರಿಂದ ಮುಖ್ಯವಾಗಿ ವಾಹನ ಸವಾರರು ಮತ್ತು ಪಾದಚಾರಿಗಳ ಪಾಡು ಹೇಳತೀರದು. ಇದರ ಪರಿಣಾಮ ನಗರದ ನಾಗರಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವುದೂ ಗುಟ್ಟಾಗೇನೂ ಉಳಿದಿಲ್ಲ. ಈ ಅವ್ಯವಸ್ಥೆಗಳು ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಗರವನ್ನು ಬಂದ್ ಮಾಡಿ ಅಧಿಕಾರಿಗಳಿಗೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.