ನಾಗಮಂಗಲ. ಆ:-20 ನಾಗಮಂಗಲ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ NH-75 ಬೆಳ್ಳೂರ್ ಕ್ರಾಸ್ ನಲ್ಲಿಗೆರೆ ಟೋಲ್ ಸಮೀಪ ಘಟನೆ
ಸಂಭವಿಸಿದೆ.ಮಂಗಳೂರು ಕಡೆಯಿಂದ ಬೆಂಗಳೂರು ನಗರಕ್ಕೆ ಸಂಚರಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೆಳ್ಳೂರ್ ಕ್ರಾಸ್ ಟೋಲ್ ಸಮೀಪದಲ್ಲಿ ಅಳವಡಿಸಿದ್ದ ಸೈನ್ ಬೋರ್ಡ್ ಗೇ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಸ್ ನ ಮುಂಭಾಗ ಜಖಂ ಗೊಂಡಿದ್ದು .ಘಟನಾ ಸ್ಥಳದಲ್ಲಿಯೇ ಬೆಂಗಳೂರು ಮೂಲದ ಕಸ್ತೂರಿ ಶಾನ್ ಬಾಗ್(64), ಹಾಗೂ ಬಸ್ ಕ್ಲೀನರ್ ಅಶೋಕ್ (25)ಮೃತ ಪಟ್ಟಿದ್ದಾರೆ.
ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನ ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ಹಾಗೂ ಎಸ್ಪಿ ಶೋಭರಾಣಿ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.
ನಂತರ ಬಿಜಿಎಸ್ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಘಟನೆಯ ಸ್ಥಳಕ್ಕೆ ಪಿಎಸ್ಐ ರವಿಕುಮಾರ್ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
