Ticker

6/recent/ticker-posts

*ನಕಲಿ ಗ್ರಾಮ ಲೆಕ್ಕಿಗರ ಪೋಷಿಸುತ್ತಿರುವ ಕಂದಾಯ ಇಲಾಖೆ ವಿರುದ್ಧ ತಮಟೆ ಚಳುವಳಿ*

ನಾಗಮಂಗಲ.ಆ :-25 ಏಳು ಜನ ನಕಲಿ ಗ್ರಾಮ ಲೆಕ್ಕಿಗರು ಡ್ಯೂಪ್ಲಿಕೇಟ್ ಮಾರ್ಕ್ಸ್ ಕಾರ್ಡ್ ಮತ್ತು ಅಂಗವಿಕಲತೆ ಸರ್ಟಿಫಿಕೇಟ್ ನೀಡಿ 2011 ರಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಪಡೆದು ಕಂದಾಯ ಇಲಾಖೆಯಲ್ಲಿ 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ತನಿಖೆ ನಡೆದಿದ್ದರು  ತಪ್ಪಿತಸ್ಥರ ವಿರುದ್ಧ ಕ್ರಮವಹಿಸದೆ ವಿಳಂಬ ಮಾಡಿರುವುದು ಮತ್ತು ನಕಲಿ ಗ್ರಾಮ ಲೆಕ್ಕಿಗರನ್ನು ಹುದ್ದೆಯಿಂದ ವಜಾಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎನ್ ನರಸಿಂಹಮೂರ್ತಿ ನೇತೃತ್ವದಲ್ಲಿ ಇಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ತಮಟೆ ಚಳುವಳಿಯನ್ನು ನಡೆಸಲಾಯಿತು.
ನಾಗಮಂಗಲ ಪಟ್ಟಣದ ವೈಭವ ಹೋಟೆಲ್ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ತಮಟೆ ಚಳುವಳಿಯ ಮೂಲಕ ಕಂದಾಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು

ಸಂಘಟನೆಯ ಸಂಚಾಲಕ ಮಾತನಾಡಿ  ಲೋಕೇಶ್ ಮೌರ್ಯ ಮಾತನಾಡಿ ನಿಜವಾದ ಅಂಗ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ನಕಲಿ ಸರ್ಟಿಫಿಕೇಟ್ ಪಡೆದಿರುವ ಗ್ರಾಮ ಲೆಕ್ಕಿಗರು ವಂಚಿಸಿದ್ದಾರೆ ಈ ಸಂಬಂಧ ಇಲಾಖೆಯಿಂದ ಪೂರ್ಣ ಪ್ರಮಾಣದ ತನಿಖೆ ನಡೆದರೂ ಕೂಡ ಇವರ ವಿರುದ್ಧ ಕ್ರಮವಹಿಸಿಲ್ಲ ಈ ತಕ್ಷಣದಿಂದಲೇ ಇವರನ್ನು ವಜಾ ಗೊಳಿಸಿ ಕ್ರಮ ಜರುಗಿಸಬೇಕೆಂದುಒತ್ತಾಯ ಮಾಡಿದರು
ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ ಎಂ ನರಸಿಂಹಮೂರ್ತಿ ಮಾತನಾಡಿ ನಕಲಿ ಅಂಗವಿಕಲತೆ ಸರ್ಟಿಫಿಕೇಟ್ ಪಡೆದಿರುವ ಅಪಾದಿತ ಗ್ರಾಮ ಲೆಕ್ಕಿಗರನ್ನು ತಕ್ಷಣದಿಂದಲೇ ವಜಾ ಗೊಳಿಸಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ  ಹೂಡಿ ಎಸ್ಐಟಿ ತನಿಖೆಗೆ ಒಳಪಡಿಸಬೇಕು ಹಾಗೂ ನಕಲಿ ಗ್ರಾಮಲೆಕ್ಕಿಗರ ಕುಟುಂಬಸ್ಥರ ಆಸ್ತಿಯ ವಿವರವನ್ನು ಸಂಗ್ರಹಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ಇವರು ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನಿರಂತರವಾಗಿ ಹೋರಾಟ ನಡೆಸಲಾಗುವುದೆಂದು ತಿಳಿಸಿದರು 

ಪ್ರತಿಭಟನೆಯಲ್ಲಿ ಕರ್ನಾಟಕ ಸಂವಿಧಾನ ಸೇನೆಯ ವಕೀಲರಾದ ಪ್ರಭಾಕರ್ ಮತ್ತು ಪದಾಧಿಕಾರಿಗಳಾದ ಕುಮಾರ್ ಪ್ರದೀಪ್ ಸೋಮಶೇಖರ್ ಚೆನ್ನಕೇಶವ ನರಸಿಂಹರಾಜು ಮತ್ತು ನೂರಾರು ಜನ ಸಂಘಟಾಕಾರರು ಭಾಗವಹಿಸಿದ್ದರು