Ticker

6/recent/ticker-posts

ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಶಿಸ್ತು ಬೆಳೆಸುವ ಸ್ಕೌಟ್ಸ್ ಅಗತ್ಯ

ಬೇಲೂರು :-ಪಟ್ಟಣದ ವಿದ್ಯಾವಿಕಾಸ ಶಾಲೆಯಲ್ಲಿ   ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಡಾ. ಪಿ. ಜಿ. ಆರ್. ಸಿಂಧ್ಯ ಅವರು ಕ್ಲಬ್, ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ದಳದ ಉದ್ಘಾಟನೆ ನೆರವೇರಿಸಿ ಮಾತನಾಡಿರು.

,ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯ ಹಾಗೂ ಶಿಸ್ತು ಬೆಳೆಸುವ ಕುರಿತು ಪ್ರಮುಖ ಸಂದೇಶ ನೀಡಿದರು.
ಸ್ವಯಂಸೇವಕರಾಗಿ ಸಮಾಜಮುಖಿ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನ ಮತ್ತು ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಭಾಗವಹಿಸಿ ಜವಾಬ್ದಾರಿಯುತ ಪ್ರಜೆಯಾಗಲು ಈ ಚಳವಳಿ ಪ್ರೇರೇಪಿಸುತ್ತದೆ.  

ಶಿಕ್ಷಕರು ಮತ್ತು ಪೋಷಕರ ಬೆಂಬಲ: ಪ್ರತಿಯೊಂದು ಶಾಲೆಯಲ್ಲೂ ಇಂತಹ ಸೇವಾ ದಳಗಳನ್ನು ಸಕ್ರಿಯಗೊಳಿಸಿ, ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸಲು ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.