ನಾಗಮಂಗಲ. ಜೂ:5. ಪ್ರಕೃತಿಯನ್ನು ನಿತ್ಯ ನಿರಂತರದಂತೆ ಕಾಪಾಡಿಕೊಂಡು ಬಂದರೆ ಪ್ರಕೃತಿಯು ಸದಾ ನಮ್ಮನ್ನು ಕಾಪಾಡಲು ಸಂಜೀವಿನಿಯಂತೆ ಇರುತ್ತದೆ ಎಂದು ಮುಖ್ಯ ಶಿಕ್ಷಕರಾದ ಚಿಕ್ಕ ಬೋರಯ್ಯನವರು ತಿಳಿಸಿದರು.
ಅವರು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಸಮೀಪವಿರುವ ಸರ್ಕಾರಿ ಪ್ರೌಢಶಾಲೆ ಹರದನಹಳ್ಳಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನಡೆವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರ ಇಂದು ನಮ್ಮಗಳ ಆಸೆಗೆ ಕಾಡುಗಳು ಪ್ರಕೃತಿ ನಾಶವಾಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಯುವ ಜನಾಂಗಕ್ಕೆ ಪರಿಸರದಿಂದ ದೊರೆಯುವ ಸೌಲಭ್ಯಗಳು ಹಾಗೂ ಪರಿಸರವನ್ನು ಇಂದು ನಾವುಗಳು ನಮ್ಮ ನಮ್ಮ ಭೂಮಿಯಲ್ಲಿ ಸುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನು ಸಂರಕ್ಷಿಸಿದರೆ ನಮ್ಮ ಆರೋಗ್ಯ ಸುಧಾರಣೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒಲವು ನೀಡುವ ಮುಖಾಂತರ ಪರಿಸರ ನಮ್ಮನ್ನು ನಿತ್ಯವೂ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ವಿಶ್ವ ದಿನಾಚರಣೆಯ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹರದನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಹಕ್ಕುಗಳ ವಿಶೇಷ ಸಭೆಯನ್ನು ನಡೆಸಲಾಯಿತು.
ಸಮಾರಂಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಗೌಡ ರವರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದ ಮತ್ತು ವಿಶೇಷ ಅತಿಥಿಗಳಾಗಿ ನಾಗಮಂಗಲ ತಾಲೂಕಿನ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಮಂಜುನಾಥ್ ರವರು ಭಾಗವಹಿಸಿದ್ದರು.
ಸಮಾರಂಭದ ಗಣ್ಯರನ್ನು ಶಿಕ್ಷಕರಾದ ರಾಜಕುಮಾರ್ ರವರು ಸ್ವಾಗತಿಸಿದರು.
