ನಾಗಮಂಗಲ. ಜೂ:-10 ಸಾಯುವ ಬೇಸಾಯದ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನದಾದ ಬೆಲೆ ಸಿಗುತ್ತದೆ ಎಂದು ಬೀಜ ಸಂರಕ್ಷಣ ಮತ್ತು ಸಂಶೋಧನಾ ವಿಭಾಗದ ಸುರೇಶ್ ರವರು ತಿಳಿಸಿದರು.
ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿಯ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕೃಷಿ ಇಲಾಖೆ ವಿಸಿ ಫಾರಂ ಹಾಗೂ ನಾಗಮಂಗಲ ತಾಲೂಕು ಸಾವಯವ ರೈತರ ಸಂಘ ಏರ್ಪಡಿಸಿದ ಸಾವಯವ ಕೃಷಿ ಉತ್ಪನ್ನ ಮತ್ತು ಅವುಗಳ ಮಾರುಕಟ್ಟೆಗೆ ಸಂಬಂಧಪಟ್ಟಂತ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಮಾರುಕಟ್ಟೆ ಬೇಕಾದಲ್ಲಿ ರೈತರು ವೈಯಕ್ತಿಕ ಮತ್ತು ಗುಂಪುಗಳ ಮುಖಾಂತರ ನೋಂದಣೆಮಾಡಿಸಿಕೊಳ್ಳುವುದರ ಮೂಲಕ ಅವರ ಭೂಮಿಯನ್ನು ಸಾವಯವ ಕೃಷಿಯತ್ತ ತೊಡಗಿಸಿಕೊಳ್ಳುವುದರಿಂದ ಅವರಿಗೆ ಹೆಚ್ಚಿನ ಪ್ರಮಾಣದ ಲಾಭ ದೊರೆಯುತ್ತದೆ ಇದನ್ನ ರೈತರುಗಳು ಅಳವಡಿಸಿಕೊಳ್ಳಲು ಮುಂದಾಗಬೇಕು, ರೈತರು ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗಲು ಇದು ಸಾಧ್ಯ ಎಂದು ತಿಳಿಸಿದರು.
ಎಚ್ ಡಿ ಕೋಟೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಅಲ್ಲಿನ ರೈತರುಗಳು ತಾವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಸುವುದಕೋಸ್ಕರವಾಗಿ ತಮ್ಮ ಭೂಮಿಯನ್ನು ನೋಂದಣಿ ಮಾಡಿಸಿಕೊಳ್ಳುವುದರ ಮೂಲಕ ಆ ಭೂಮಿಯಲ್ಲಿ ಬೆಳೆದಂತಹ ಬೆಳೆಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಸಿಗುವುದರಿಂದ ಅವರಿಗೆ ಹೆಚ್ಚಿನದಾದ ಲಾಭ ಸಿಗುತ್ತಿದೆ.
ಇಲ್ಲಿ ಬೆಳೆದಂತಹ ಸಾವಯವ ರಾಗಿಗೆ 50 ರಿಂದ 60 ರೂಪಾಯಿಗಳಿಗೆ ಮಾತ್ರ ಬೆಲೆ ಇದ್ದರೆ ಇದು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಹೋದಾಗ 250ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನದಾದ ಲಾಭ ಸಿಗುತ್ತಿದೆ. ಅದೇ ರೀತಿ ತಾವು ಬೆಳೆದಂತಹ ಹಣ್ಣು ಹಾಗೂ ವಿವಿಧ ತೋಟಗಾರಿಕಾ ಉತ್ಪನ್ನಗಳಿಗೂ ಸಹ ತಾವು ಮಾರುಗಟ್ಟಿಗೆ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಸಿ ಫಾರ್ಮ್ ನ ಮಣ್ಣಿನ ತಜ್ಞರಾದ ಅತಿಫಾ ಮುನವರ್ ರವರು ಹಾಗೂ ಮಹೇಶ್ ರವರು ಭಾಗವಹಿಸಿದ್ದು, ಸಾವಯವ ಕೃಷಿಕ ರೈತರ ಸಂಘದ ಅಧ್ಯಕ್ಷರಾದ ಮರಡಿಪುರದ ಸಂತೋಷ್, ನಾಗರಾಜು, ಬ್ರಹ್ಮದೇವರಹಳ್ಳಿ ಲೋಕೇಸ್ವಾಮಿ, ದೇಶಪ್ರೇಮಿ ಶ್ರೀನಿವಾಸ, ನಿವೃತ್ತ ಉಪ ತಹಸಿಲ್ದಾರ್ ಸೋಮರಾಜ್ ರವರು ಭಾಗವಹಿಸಿದ್ದರು.
