ನಾಗಮಂಗಲ ಜೂನ್ 10 ನಾಗಮಂಗಲ ತಾಲೂಕು ಬಿಜೆಪಿ ವತಿಯಿಂದ ಶ್ರೀ ಸೌಮ್ಯ ಕೇಶವ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಇನ್ನು ಹೆಚ್ಚಿನದಾದ ಪ್ರಗತಿದಾಯಕ ಹೆಜ್ಜೆಗಳನ್ನು ಇಡಲಿ ಎಂದು ಭಗವಂತನಲ್ಲಿ ಕೋರಿದರು.
ಅವರು ಇಂದು ನಾಗಮಂಗಲದಲ್ಲಿ ಈ ದಿನ 10ನೇ ತಾರೀಖಿನಂದು ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನದ ಅವಧಿ ನೆಹರುಗಿಂತ ಹೆಚ್ಚಿನ ಸಮಯವನ್ನು ಆಳ್ವಿಕೆ ಮಾಡುವುದರ ಮೂಲಕ ಅವರ ದಾಖಲೆಯನ್ನು ಮುರಿದಿರುತ್ತಾರೆ. ಅಷ್ಟೇ ಅಲ್ಲದೆ ನೆಹರುರವರು ಮಾಡಿರುವುದಕ್ಕಿಂತ ಹೆಚ್ಚಿನದಾದ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿಯವರು ಮಾಡಿರುತ್ತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಪರಮೇಶ್ ರವರು ತಿಳಿಸಿದರು.
ನೆಹರೂರವರು ಪ್ರಧಾನಿಯಾಗಿದ್ದಾಗ ಭಾರತದ ಆಡಳಿತ ಹಾಗೂ ಮೋದಿ ಅವರ ಅಭಿವೃದ್ಧಿ ಪಥದ ಹೆಜ್ಜೆ ನೆಹರುರವರಿಗಿಂತ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿ ರವರು ಪ್ರಧಾನಿಯಾದ ನಂತರ ಭಾರತದಲ್ಲಿ ಭೂ ಭಾಗವನ್ನು ಮತ್ತೆ ಭಾರತದತ್ತ ಸೆಳೆಯುವ ಪ್ರಯತ್ನವನ್ನು ಮಾಡುವುದಲ್ಲದೆ ಬೇರೆ ದೇಶಗಳು ಭಾರತದ ಮೇಲೆ ಅಕ್ರಮಣ ಮಾಡದಂತೆ ಬೆದರಿಕೆಯನ್ನು ತಂದಿಟ್ಟಿದ್ದಾರೆ. ಹಿಂದೆ ಬೇರೆ ದೇಶಗಳು ಭಾರತವನ್ನು ಕಂಡರೆ ಕೆಟ್ಟ ಭಾವನೆಯಲ್ಲಿ ಕಾಣುತ್ತಿದ್ದರು, ಆ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಇಂದು ಭಾರತ ವಿಶ್ವ ಮಾನ್ಯ ಆಗುವಲ್ಲಿ ತಮ್ಮದೇ ಆದ ಪ್ರಯತ್ನಗಳನ್ನು ಮಾಡುವುದರ ಮೂಲಕ ಭಾರತದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ.
ದೀರ್ಘಾವಧಿ ಆಳಿಕೆಯೊಂದಿಗೆ ಭಾರತದ ಸಾರ್ವಭೌಮತ್ವವನ್ನು ಎತ್ತಿ ತೋರಿದ ಏಕೈಕ ಪ್ರಧಾನಿ ಎಂದರೆ ನರೇಂದ್ರ ಮೋದಿ ರವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧಲಿಂಗ ಸ್ವಾಮಿ, ಕೊಣನೂರು ಶಿವನಂಜೇಗೌಡ, ಮಿಷನ್ ಮೋದಿ ಟೀಮ್ ಅಧ್ಯಕ್ಷರಾದ ದೇಶಪ್ರೇಮಿ ಶ್ರೀನಿವಾಸ್, ಉಪಾಧ್ಯಕ್ಷರಾದ ಬ್ರಹ್ಮದೇವರಲ್ಲಿ ಲೋಕೇಸ್ವಾಮಿ ರವರು ಉಪಸ್ಥಿತರಿದ್ದು.
