Ticker

6/recent/ticker-posts

ಅಜಂತ ಟ್ರಸ್ಟ್ ಹಾಗೂ ಶಾಕ್ಯ ನಾಟ್ಯ ಕಲಾ ಸಂಘದಿಂದ ಬಸವ ಜಯಂತಿ


'ವಚನ ಕ್ರಾಂತಿ ಇಂದಿಗೂ ಪ್ರಸ್ತುತ'

ಸಂತೇಮರಹಳ್ಳಿ: 'ಕಾಯಕ ತತ್ವದಡಿ-ಯಲ್ಲಿ ಎಲ್ಲ ಸಮುದಾಯದ ಜನರನ್ನು ಒಂದೇ ಸೂರಿನಡಿ ತಂದು ಸಮಾನತೆ ಸಾರಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ' ಎಂದು ಪತಂಜಲಿ ಯೋಗ ಶಿಕ್ಷಣದ ಯೋಗ ಪ್ರಕಾಶ್ ತಿಳಿಸಿದರು. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್

ಸಮುದಾಯ ಭವನದಲ್ಲಿ ಅಜಂತ ಟ್ರಸ್ಟ್ ಹಾಗೂ ಶಾಕ್ಯ ನಾಟ್ಯ ಕಲಾ ಸಂಘದ ವತಿಯಿಂದ ನಡೆಯುತ್ತಿರುವ ಮಕ್ಕಳ ರಂಗ ಬೇಸಿಗೆ ಶಿಬಿರದಲ್ಲಿ ಸೋಮವಾರ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಜಾತಿ, ಧರ್ಮ ಹಾಗೂ ಲಿಂಗ ಬೇಧವಿಲ್ಲದೆ ಸರ್ವರನ್ನು ಸಮಾನವಾಗಿ ಕಾಣುವ ಮೂಲಕ ಸಮಾಜಕ್ಕೆ ಸಮಾನತೆಯ ಜೀವ ತುಂಬಿದರು. ಅಂದು ಅವರು ಮಾಡಿದ ವಚನ ಕ್ರಾಂತಿಗಳು ಇಂದಿಗೂ ಪ್ರಸ್ತುತ ವಾಗಿವೆ' ಎಂದು ತಿಳಿಸಿದರು.

ಚಾಮೂಲ್‌ ನಿರ್ದೇಶಕ ಕಮರವಾಡಿ ರೇವಣ್ಣ ಮಾತನಾಡಿ, 'ಬಸವಣ್ಣನವರು 12ನೇ ಶತಮಾನದಲ್ಲಿ ಮಾನವ ಕಲ್ಯಾಣಕ್ಕಾಗಿ ಸಮಾನತೆ ಸಾರಿದರು. ಅಂದಿನ ಕಾಲದಲ್ಲಿದ್ದ ಅಸಮಾನತೆಯ ವಿರುದ್ಧ ಚಳವಳಿ ಮಾಡಿದರು. ಪುರುಷರಷ್ಟೇ ಮಹಿಳೆಯರು ಸಮಾನರು ಎಂಬ
ಸಂತೇಮರಹಳ್ಳಿಯ ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಜಂತ ಟ್ರಸ್ಟ್ ಹಾಗೂ ಶಾಕ್ಯ ನಾಟ್ಯ ಕಲಾ ಸಂಘದ ವತಿಯಿಂದ ನಡೆಯುತ್ತಿರುವ ಮಕ್ಕಳ ರಂಗ ಬೇಸಿಗೆ ಶಿಬಿರದಲ್ಲಿ ಬಸವ ಜಯಂತಿ ಆಚರಿಸಲಾಯಿತು

ಪರಿಕಲ್ಪನೆಯನ್ನು ಹುಟ್ಟು ಹಾಕಿದ ಪರಿಣಾಮವಾಗಿ ಇಂದು ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವಂತಾಗಿದೆ' ಎಂದು ತಿಳಿಸಿದರು. ಶಿಬಿರದ ನಿರ್ದೇಶಕ ಕಮರವಾಡಿ ಮಹದೇವಸ್ವಾಮಿ ಜೆಡಿಎಸ್‌ ಮುಖಂಡ  ಬಾಗಳಿ ರೇವಣ್ಣ, ದೀಪಾಬುದ್ದೆ, ಪ್ರಭಾವತಿ, ಮಹೇಶ್ ಕುಮಾರ್, ಪ್ರಕಾಶ್, ರಾಜಶೇಖರ್, ಸ್ನೇಕ್ ಮಂಜು, ಶಿವಣ್ಣ, ಯೋಗೇಂದ್ರ, ಶೇಖ‌ರ್ ಹಾಜರಿದ್ದರು.
ವರದಿ ಹೊನ್ನೂರು ಪರಮೇಶ್