ಕೊಳ್ಳೇಗಾಲ. ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿ ಆಚರಣಾ ಸಮಿತಿ, ಭೀಮನಗರ ಯಜಮಾನರು & ಕುಲಸ್ಥರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ ಹಾಗೂ ಭೀಮನಗರದ ವೈದ್ಯರ ಬಳಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತೋತ್ಸವದ ಅಂಗವಾಗಿ ಇಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.
ಪಟ್ಟಣದ ಭೀಮನಗರದ ಬಸವನಗುಡಿ ಬಳಿ ನಡೆದ ರಕ್ತದಾನ ಶಿಬಿರವನ್ನು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಅವರು ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಅಧುನಿಕ ಯುಗದಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತೋತ್ಸವದ ಅಂಗವಾಗಿ ಭೀಮನಗರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು.
ಸಂತೋಷದಾಯಕ ವಿಚಾರವಾಗಿದೆ. ಪ್ರತಿಯೊಬ್ಬರು ನೀಡುವ ರಕ್ತದಾನ ಶ್ರೇಷ್ಠ ದಾನವಾಗಿದೆ. ಒಬ್ಬರಿಂದ ಸಂಗ್ರಹಿಸುವ 350 ಯೂನಿಟ್ ರಕ್ತದಿಂದ ತುರ್ತು ಪರಿಸ್ಥಿತಿಯಲ್ಲಿರುವ ನಾಲ್ಕು ಜನರಿಗೆ ರಕ್ತ ಉಪಯೋಗಕ್ಕೆ ಬರುತ್ತದೆ. ಆದ್ದರಿಂದ ಪ್ರತಿವರ್ಷವೂ ಭೀಮನಗರದಲ್ಲಿ ರಕ್ತದಾನ ಶಿಬಿರ ಏರ್ಪಡಿಸುತ್ತಿರುವ ಪ್ರಕ್ರಿಯೆ ಮುಂದುವರೆಯಲಿ ಎಂದು ಆಶಿಸಿದರು..
ಅಲ್ಲದೇ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಹತ್ವವಾದ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಜ್ಞಾನ ಅತೀ ಶಕ್ತಿಯುತವಾದ್ದದು ಎಂದು ತಿಳಿಸಿದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮ ದಿನದ ಅಂಗವಾಗಿ ಇಲ್ಲಿನ ಭೀಮನಗರದ ಯಜಮಾನರುಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಮೂರು ದಿನಗಳ ಅಂಬೇಡ್ಕರ್ ಹಬ್ಬವನ್ನಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಇದ್ದಾರೆ. ಮೊದಲನೇ ದಿನವಾದ ಇಂದು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ನಾಳೆ ಸಂಜೆ ಬುಧ್ಧರ ಜೀವನ ಆಧಾರಿತ ನೃತ್ಯರೂಪಕ ಕಾರ್ಯಕ್ರಮ ಹಾಗೂ ಏ.14 ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಿದ್ದಾರೆ ಎಂದರು.
ಎಲ್ಲಾ ವರ್ಗದ ಎಲ್ಲಾ ಜನರು ಒಂದಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸ್ಸನ್ನು ಭೀಮನಗರದ ಯಜಮಾನರು ಹಾಗೂ ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಸಕಾರಗೊಳಿಸುತ್ತಿರುವುದು ಮೆಚ್ಚುವಂತಹ ವಿಷಯವಾಗಿದೆ ಎಂದು ತಿಳಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಮೂರು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವ ಎಲ್ಲರಿಗೂ ಶುಭ ಹಾರೈಸಿದರು.
ಇಂದಿನ ಶಿಬಿರದಲ್ಲಿ ಒಟ್ಟು 33 ಮಂದಿ ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ, ಭೀಮನಗರದ ವೈದ್ಯರ ಬಳಗದ ಡಾ.ಹೆಚ್.ಶ್ರೀಧರ್, ಡಾ.ಪ್ರಿಯದರ್ಶಿನಿ, ಡಾ.ಸಾಹೀಲ್ ಅಹಮದ್, ಡಾ.ವನ್ಸಿಕಾ, ಚಾ.ನಗರ ಬ್ಲಡ್ ಬ್ಯಾಂಕ್ ಹಿರಿಯ ಪ್ರಯೋಗಶಾಲಾ ತಂತ್ರಜ್ಞಾನರು ಸತ್ಯ, ಡಿಎಸ್ಎಸ್ ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು, ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಧರ್, ಭೀಮನಗರದ ದೊಡ್ಡ ಯಜಮಾನರು ಚಿಕ್ಕಮಾಳಿಗೆ, ಯಜಮಾನರು ವರದರಾಜು, ಎಸ್.ಪ್ರಭುಸ್ವಾಮಿ, ಎಂ.ಎಸ್.ಸುರೇಶ್, ಜಿ.ಸಿದ್ದರಾಜು, ನಿಂಗರಾಜು, ಸಾವುಕಯ್ಯ, ಎಸ್.ಸಿದ್ದರಾಜು, ಕೆ.ಕೆ.ಮೂರ್ತಿ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಚಂದು, ನಾಮ ನಿರ್ದೇಶಿತ ಸದಸ್ಯರು ಆನಂದ್, ಮುಖಂಡರು ರಾಜಶೇಖರ ಮೂರ್ತಿ, ರಾಚಪ್ಪಾಜಿ, ದಿಲೀಪ್, ಸಿದ್ದಪ್ಪಾಜಿ, ಸನತಕುಮಾರ್, ಸಿದ್ದಾರ್ಥ್, ಗುರುಮೂರ್ತಿ, ಶಂಕರ್ ಚೇತನ್, ವಕೀಲ ಬಸವರಾಜು, ಬೆಂಜಿಮಿನ್, ಡಾ.ಅಂಬೇಡ್ಕರ್ ಆಟೋ ಚಾಲಕರ ಸಂಘದ ಹರೀಶ್ ಹಾಗೂ ಇತರರು ಇದ್ದರು.
