Ticker

6/recent/ticker-posts

*ಕಾಯಕದಿಂದಲೇ ಕೈಲಾಸ ಕಾಣಿ ಎಂಬ ಬಸವಣ್ಣನವರ ನುಡಿ ಸರ್ವಕಾಲಿಕವಾದದ್ದು:- ಆದರ್ಶ್*

ನಾಗಮಂಗಲ. ಏ:- 20 ನೀವು ಮಾಡುವ ಕಾಯಕದಿಂದಲೇ ಕೈಲಾಸವನ್ನ ಕಾಣಿ ಎಂಬ ಬಸವಣ್ಣನವರ ನುಡಿಯುವ ಸರ್ವಕಾಲಿಕವಾದದ್ದು ಎಂದು ನಾಗಮಂಗಲ ತಾಲೂಕು ದಂಡಾಧಿಕಾರಿಗಳಾದ ಆದರ್ಶ್ ರವರು ಮಾತನಾಡಿದರು.

 ನಾಗಮಂಗಲ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು 

 ಪ್ರತಿಯೊಬ್ಬರೂ ಸಹ ತಾವು ಮಾಡುವಂತಹ ಕೆಲಸವನ್ನು ನಿಷ್ಠೆಯಿಂದ ಮಾಡುವುದರ ಮೂಲಕ ಕೈಲಾಸವನ್ನೇ ಕಂಡಂತಹ ತೃಪ್ತಿ ಸಿಗುತ್ತದೆ. ಬಸವಣ್ಣನವರ ಜೀವಿತಾವಧಿ 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಗಳು ಮತ್ತು ಜನಸಾಮಾನ್ಯರಲ್ಲಿ ಮೇಲು ಕೀಳಂಬ ಭಾವಗಳು ಅತಿ ಹೆಚ್ಚು ತುಂಬಿದ್ದವು, ಅಂತಹ ಕಠಿಣ ಕಾಲದಲ್ಲಿ ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಸಮಾಜ ಸುಧಾರಣ ಚಟುವಟಿಕೆಗಳಲ್ಲಿ ತಮ್ಮನ ತಾವು ಅರ್ಪಿಸಿಕೊಂಡರು. 

 ಬಸವಣ್ಣನವರ ಹೇಳಿರುವ ವಚನದಲ್ಲಿನ ಕಾಯಕವೇ ಕೈಲಾಸ ಎಂಬದ್ದನ್ನು ನಾವು ನೋಡಿದಾಗ ನಾವು ಮಾಡುವ ಕೆಲಸವನ್ನು  ಉತ್ತಮ ರೀತಿ ಜನ ಮೆಚ್ಚುವಂತೆ ಮಾಡುತ್ತ ಅದರಲ್ಲೇ ನಮಗೆ ಶಿವನನ್ನು ಕಾಣಲು ಸಾಧ್ಯ ಎಂಬುದನ್ನು ಅಂದು ಬಸವಣ್ಣನವರು ತಿಳಿಸಿಕೊಟ್ಟರು. ಅಂದು ಅನುಭವ ಮಂಟಪ ಎಂಬ ಚಿಂತನ ಮಂಥನದ ಕೇಂದ್ರವನ್ನು ಮಾಡುವುದರ ಮೂಲಕ ಸಮಾಜದಲ್ಲಿನ ಎಲ್ಲರೂ ಬಂದು ತಮ್ಮ ಅರಿವನ್ನ ಅಲ್ಲಿ ಪ್ರಸ್ತುತಪಡಿಸುವುದನ್ನ ಮತ್ತು ಅದರ ತಿರುಳನ್ನು ಸಾರುವಂತಹ ಕೆಲಸಕ್ಕೆ ಒಂದು ಅವಕಾಶವನ್ನು ಕಲ್ಪಿಸಿ ಕೊಟ್ಟರು. ಇದರಿಂದ ಸಮಾಜದಲ್ಲಿನ ಎಲ್ಲಾ ವರ್ಗದವರು ಸಹ ತಮ್ಮ ಅನುಭವವನ್ನ ತಿಳಿಸುವುದರ ಮೂಲಕ ಬಸವಧರ್ಮದತ್ತ ತಮ್ಮನ ತೊಡಗಿಸಿಕೊಂಡರು.
ಬಸವಣ್ಣನವರವಿಚಾರಧಾರೆಗಳನ್ನು ಕುರಿತಂತೆ ರಘುನಾಥ್ ಸಿಂಗ್ ರವರು ತಿಳಿಸಿದರು ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ನಾರಾಯಣ್ ರವರು, ತಾಲೂಕು ವೀರಶೈವ ಸಂಘದ ಅಧ್ಯಕ್ಷರಾದ ಪರಮೇಶ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷರಾದ ಗೀತಾ ಗುರುಪ್ರಸಾದ್, ರಾಜಶೇಖರ್ ಬ್ರಹ್ಮದೇವರಹಳ್ಳಿ ಲೋಕಶ್ ಸ್ವಾಮಿ ಹಾಗೂ ವೀರಶೈವ ಸಮಾಜದ, ವಿವಿಧ ಸಂಘಟನೆಗಳ  ಮುಖಂಡರುಗಳು ಭಾಗವಹಿಸಿದ್ದರು.