ನಾಗಮಂಗಲ.ಏ:-17 ಬೆಂಗಳೂರಿನಲ್ಲಿ ಏಪ್ರಿಲ್ 24 ರಿಂದ 26, ರವರೆಗೆ 3ನೇ ರಾಜ್ಯ ಮಟ್ಟದ ವಿಶ್ವಕರ್ಮ ವಧು-ವರರ ಅನ್ವೇಷಣಾ ಸಮಾವೇಶ.ನಡೆಯಲಿದೆ. ರೇಸ್ ಕೋರ್ಸ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಕೆ.ಪಿ. ನಂಜುಂಡಿ ಅವರ ನೇತೃತ್ವದಲ್ಲಿ, ಅವಿವಾಹಿತರು, ವಿಧವೆಯರು, ವಿಧುರರು ಮತ್ತು ವಿಚ್ಛೇದಿತರಿಗಾಗಿ ನೋಂದಣಿ ಆಧಾರಿತ ಮ್ಯಾಟ್ರಿಮೋನಿ ಕಾರ್ಯಕ್ರಮ ಆಯೋಜಿಸಲಾಗಿದೆ ಈ ಅವಕಾಶವನ್ನ ಸದ್ಭಳಕೆ ಮಾಡಿಕೊಳ್ಳುವಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ್ ಕದಲೂರು ತಿಳಿಸಿದರು.
ಅವರಿಂದು ನಾಗಮಂಗಲ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೆ ಪಿ ನಂಜುಂಡಿ ಅವರ ಅಧ್ಯಕ್ಷತೆಯಲ್ಲಿ 2 ಬಾರಿ ವಿಶ್ವಕರ್ಮ ವಧು -ವರರ ಅನ್ವೇಷಣಾ ಕಾರ್ಯಕ್ರಮ ಯಶಸ್ವಿಗೊಂಡಿದೆ. 2026ರಲ್ಲಿ 3 ನೇ ಬಾರಿಗೆ ವಿಶ್ವಕರ್ಮ ವಧು -ವರರ ಅನ್ವೇಷಣಾ ಕಾರ್ಯಕ್ರಮ ಆಯೋಜನೇ ಮಾಡಿದ್ದೇವೆ ಈ ಸದವಕಾಶ ವನ್ನ ವಿಶ್ವಕರ್ಮ ಜನಾಂಗದವರು ಸದ್ಭಳಕೆ ಮಾಡಿ ಕೊಳ್ಳುವಂತೆ ತಿಳಿಸಿದರು.
ವಧುವರರ ಮತ್ತು ಕುಟುಂಬಸ್ಥರಿಗೆ ಮುಕ್ತವಾಗಿ ಭೇಟಿ ಮಾಡುವ ಹಾಗೂ ಆಪ್ತ ಸಮಾಲೋಚನೆಗೇ ಅವಕಾಶವನ್ನ ಮಾಡಿಕೊಡುತ್ತೇವೆ. ಸಮಾಲೋಚನೆ ಸಂದರ್ಭದಲ್ಲಿ ಪರಸ್ಪರ ಕುಟುಂಬಗಳು ಮಾತುಕತೆ ಮೂಲಕ ಒಪ್ಪಿದರೆ ಸ್ಥಳದಲ್ಲೇ ವಿವಾಹ ನಿಶ್ಚಯ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದ್ದೇವೆ ಎಂದರು.
ಭಾಗವಹಿಸಲು ಇಚ್ಚಿಸುವ ವಧು ವರರು ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಲು ತಿಳಿಸಿದರು.
ಮದ್ದೂರು ತಾಲೋಕ್ ಅಧ್ಯಕ್ಷರು ಮಹೇಶ್. ಈಶ್ವರ್, ಶ್ರೀಕಂಠಚಾರ್. ಸುಕನ್ಯ,ವಿಶ್ವಕರ್ಮ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
