ಸಂತೇಮರಹಳ್ಳಿ : ಸಮೀಪದ ಕೆಂಪನಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವಾಗಿದ್ದ ಎರಡು ನಿರ್ದೇಶಕರ ಸ್ಥಾನಕ್ಕೆ ಕೆ ವಿ ದೇವೇಂದ್ರ ಮತ್ತು ರಾಜಮ್ಮ ರಾಮಸ್ವಾಮಿಯವರನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕೋ- ಅಪ್ ಮಾಡುವ ಮೂಲಕ ಸರ್ವಾನುಮತದಿಂದ ಅವಿರೋಧವಾಗಿ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು.
ಈ ಬಳಿಕ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಿ ಮಾತನಾಡಿದ ದೇವೇಂದ್ರ ಎರಡು ವರೆ ವರ್ಷದ ಅವಧಿಯಲ್ಲಿ ಪಿಎಸಿಸಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ರೈತರ ಪರವಾಗಿ ನಿಲ್ಲುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ ಎಂ ಶಿವಶಂಕರ್ ರವರು ಮತ್ತು ನಿರ್ದೇಶಕರುಗಳಾದ ಕೆ ಎಂ ಗುರುಸಿದ್ದಪ್ಪ,ಕೆ ಎಂ ಪ್ರಭುಸ್ವಾಮಿ,ಕೆ ಬಿ ನಾರಾಯಣಸ್ವಾಮಿ, ಕುಮಾರ್, ಬಂಗಾರ ನಾಯ್ಕ, ದೊಡ್ಡ ಮಾರಶೆಟ್ಟಿ, ಚಿನ್ನಸ್ವಾಮಿ, ಶೋಭಾ, ಪ್ರಭಾಮಣಿ, ಹಾಗೂ ಮುಖಂಡರುಗಳಾದ ಶಂಕರಮೂರ್ತಿ, ಕೇಶವಮೂರ್ತಿ,ಬಸವಶೆಟ್ಟಿ, ಮಣಿಕಂಠ ಹಾಗೂ ಆಡಳಿತ ಮಂಡಳಿಯ ಸಿ ಇ ಓ ಮಮತಾ , ಪಿ ಮಹದೇವಪ್ಪ, ರಾಕೇಶ್,ಸಾಗರ್ ಹಾಜರಿದ್ದರು.
ವರದಿ:- ಹೊನ್ನೂರು ಪರಮೇಶ್
