Ticker

6/recent/ticker-posts

ಒಬಿಸಿ ಸಮೀಕ್ಷೆ ಗಣತಿದಾರರಿಗೆ ಸನ್ಮಾನ: ಸಿಹಿ ಹಂಚಿ ಸಂಭ್ರಮಿಸಿದ ಎ ಮಹಾಲಿಂಗಯ್ಯ


ತುಮಕೂರು :ಕರ್ನಾಟಕ ಸರ್ಕಾರ ವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಪ್ರಾರಂಭ ಮಾಡಿರುವ ಒಬಿಸಿ ಸಮೀಕ್ಷೆ ಹೆಮ್ಮೆಪಡುವಂತ ವಿಚಾರ,  ಗಣತಿದಾರರು(ಶಿಕ್ಷಕ) ಮನೆ ಬಳಿ ಬಂದಾಗ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ಮನವಿ ಮಾಡಿದರು.

ನಗರದ ಒಂದನೇ ವಾರ್ಡ್ ಅವರ ನಿವಾಸದ ಬಳಿ ಒಬಿಸಿ ಜಾತಿ ಗಣತಿಗೆ ಮಾಹಿತಿ ಹಂಚಿಕೊಂಡು, ಗಣತಿದಾರರಿಗೆ ಸನ್ಮಾನಿಸಿ, ಸಿಹಿ ಹಂಚಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು, ಡಾ. ಡಿ ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಸಿದ್ದರಾಮಯ್ಯನವರು, ರಾಜ್ಯಾದ್ಯಂತ 1.49 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ಬಳಸುತ್ತಿದೆ. 
ಸೆ. 22 ರಿಂದಪ್ರಾರಂಭವಾಗಿರುವ ಈ ಸಮೀಕ್ಷೆಗೆ ಇತರ ಇಲಾಖೆಗಳ 75,064 ನೌಕರರನ್ನುನೇಮಿಸಲಾಗಿದೆ, ರಾಜ್ಯದಲ್ಲಿರುವ ಹಿಂದುಳಿದ ವರ್ಗದ ಸಮುದಾಯದವರು ಸಮೀಕ್ಷೆಗೆ ಸಹಕರಿಸಿ, ರಾಜ್ಯ ಸರ್ಕಾರ ಕೈಗೊಂಡಿರುವ ಒಬಿಸಿ ಸಮೀಕ್ಷೆ ಯಶಸ್ವಿ ಗೊಳಿಸುವಂತೆ ಎ ಮಹಾಲಿಂಗಯ್ಯ ತಿಳಿಸಿದರು.

ಒಬಿಸಿ ಸಮೀಕ್ಷೆಗೆ ಆಗಮಿಸಿದ ಶಿಕ್ಷಕರು ಜಾತಿ ಗಣತಿಗೆ ಬೇಕಾದ ಸೂಕ್ತ ದಾಖಲಾತಿ ಮತ್ತು ಮಾಹಿತಿ ನೀಡಿ ಸಹಕರಿಸಿದಕ್ಕೆ ಸಂತಸ  ವ್ಯಕ್ತಪಡಿಸಿದ್ದರು ಪಡಿಸಿದರು.
 
ಈ ಸಂದರ್ಭದಲ್ಲಿ ಗಣತಿದಾರರು, ಎ ಮಹಾಲಿಂಗಯ್ಯನವರ ಕುಟುಂಬಸ್ಥರು ಉಪಸ್ಥಿತರಿದ್ದರು.



ವರದಿ: ಶಿವಾನಂದ ಎಸ್ ಜಿ
ತುಮಕೂರು