Ticker

6/recent/ticker-posts

*ಕ್ಯಾತಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಎನ್ ಶಿವನಂಜಪ್ಪ ಉಪಾಧ್ಯಕ್ಷೆರಾಗಿ ಚನ್ನಾಜಮ್ಮ ಅವಿರೋಧವಾಗಿ ಅಯ್ಕೆ*

 ಕೆ.ಎಂ ದೊಡ್ಡಿ :- ಕೆ.ಎಂ ದೊಡ್ಡಿ ಸಮೀಪದ ಕ್ಯಾತಘಟ್ಟ  ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಎನ್.ಶಿವನಂಜಪ್ಪ ಉಪಾಧ್ಯಕ್ಷೆಯಾಗಿ ಶ್ರೀಮತಿ ಚನ್ನಾಜಮ್ಮನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 
ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರಕಾಶ್ ಹಾಗೂ ಉಪಾಧ್ಯಕ್ಷೆ ಶೈಲಜಾ ಶಂಕರೇಗೌಡರವರ  ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎನ್ ಶಿವನಂಜಪ್ಪ ಹಾಗೂ ಚನ್ನಾಜಮ್ಮರವರನ್ನು ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ಎನ್ ಶಿವನಂಜಪ್ಪ ಹಾಗೂ ಚನ್ನಾಜಮ್ಮನವರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.

ಚುನಾವಣಾಧಿಕಾರಿಯಾಗಿ ಮದ್ದೂರು ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ರಾಜೇಶ್ವರಿಯವರು ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷರಾಗಿ  ಆಯ್ಕೆಯಾದ ಕೆ.ಎನ್ ಶಿವನಂಜಪ್ಪ ಮಾತನಾಡಿ ನನಗೆ ಅಧ್ಯಕ್ಷರಾಗಲು ಸಹಕರಿಸಿದ ಸದಸ್ಯರಗಳಿಗೆ ಹಾಗೂ ಪಂಚಾಯಿತಿ ವ್ಯಾಪ್ತಿಯ  ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಕ್ಯಾತಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ ಅಲ್ಲದೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚನ್ನಾಜಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು,ನಿರೀಷಾ,ಸುಂದರಮ್ಮ, ಪ್ರಕಾಶ್, ಮಹಾಲಕ್ಷ್ಮಿ, ಜೀವಿತ,ಸಿದ್ದಲಕ್ಷಮ್ಮ,ರಾಜೇಶ್,ವೆಂಕಟೇಶ್, ಶೈಲಜಾ ಮುಖಂಡರಾದ ಕೆ.ಟಿ ಗಿರೀಶ್,ದೇವರಾಜು,ವಿಜಯಕುಮಾರ್, ಕುಮಾರ್,ಪಿಣ್ಣಯ್ಯ, ಶಂಕರ್ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು...

 *ವರಧಿ :- ಸಂತೋಷ್ ಟಿಬಿ*