Ticker

6/recent/ticker-posts

ಸಮೀಕ್ಷೆ ನಡೆಯದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ ತಹಶೀಲ್ದಾರ್ :ಕುಂ.ಞ.ಅಹಮದ್


ತುರುವೇಕೆರೆ: ತಾಲೂಕಿನ ಯಾವುದೇ ಗ್ರಾಮ/ ಹಟ್ಟಿ/ ಕಾಲೋನಿ /ಬೀದಿಗಳಲ್ಲಿ /ಕುಟುಂಬದಲ್ಲಿ ಮನೆ ಸಮೀಕ್ಷೆ ನಡೆಯದೇ ಇದ್ದಲ್ಲಿ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ ತಹಶೀಲ್ದಾರ್ :ಕುಂ.ಞ.ಅಹಮದ್.
  ತಾಲ್ಲೂಕು ಕಚೇರಿಯಲ್ಲಿ ಪತ್ರಿಕೆಯೊಂದಿಗೆ  ಮಾತನಾಡಿದರು.

 ಅವರು ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಸೀಲ್ದಾರ್ ಕುಂ.ಇ.ಅಹಮದ್  ರವರು ತಾಲೂಕಿನ ನಾಗರೀಕರಿಗೆ ಮನವಿ ಮಾಡಿದರು.

 13.08.2025 ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ ಅದರಂತೆ ತುರುವೇಕೆರೆ ತಾಲೂಕಿನಲ್ಲಿಯೂ ಸಹಾ 443 ಸಮೀಕ್ಷೆದರಾರು, 22 ಸಮೀಕ್ಷಾ ಮೇಲ್ವಿಚಾರಕರು, 12ಮಾಸ್ಟರ್ ಟ್ರೈನರ್ಗಳು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ ಆದರಿಂದ ತುರುವೇಕೆರೆ ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು 07.10.2025 ರ ಒಳಗೆ ಕೆಳಕಂಡ ತುರುವೇಕೆರೆ ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ ,

 ಮಾಹಿತಿಒದಗಿಸುವುದು ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರು ತಮ್ಮ ಸಮೀಕ್ಷೆಯನ್ನು ತಾವೇ ಮಾಡಲು ಇಚ್ಚಿಸಿದಲ್ಲಿ ಕೆಳಕಂಡ ಅಂತರ್ಜಾಲ ಕೊಂಡಿ ಬಳಸಿ ಸಮೀಕ್ಷೆಯಲ್ಲಿ ಸ್ವ – ಇಚ್ಛೆಯಿಂದ ಭಾಗವಹಿಸಿ , ವಿವರಗಳನ್ನು ಭರ್ತಿ ಮಾಡಿ , ಸಮೀಕ್ಷಾ ಐಡಿ / ಅಪ್ಲಿಕೇಷನ್ ಐಡಿಯನ್ನು ಅಂಟಿಸಿರುವ ಯು.ಹೆಚ್.ಐ.ಡಿ ಸ್ಟಿಕರ್ ಮೇಲೆ ನಮೂದಿಸಬೇಕಾಗಿ ಮನವಿ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 08139-295838ಮತ್ತು 9902896988 ಸಂಖ್ಯೆಗೆ   ಸಂಪರ್ಕಿಸಲು ಮನವಿ ಮಾಡಿದ್ದಾರೆ.