ನಾಗಮಂಗಲ. ಅ:-7 ಭಾರತದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರುಶೂ ಎಸೆಯಲು ವಕೀಲರೂಬ್ಬರು ಯತ್ನಿಸಿರುವ ಘಟನೆ ಅನಾಗರಿಕ ವರ್ತನೆಯಾಗಿದ್ದು ಎಂದು ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ತೀವ್ರವಾಗಿ ಖಂಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿರವರ ಮೇಲೆಶೂ ಎಸೆಯಲು ಯತ್ನಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಆದ ಅವಮಾನ ಸಂವಿಧಾನದ ಸಾರ್ವಭೌಮತ್ವವನ್ನು ಅವಮಾನಿಸಲು ಯತ್ನಿಸಿದ ಕೃತ್ಯವಾಗಿದ್ದು ಇಂತಹ ಘಟನೆಗೆ ಕಾರಣವಾದ ವಕೀಲನ ವರ್ತನೆ ಯಾರು ಕ್ಷಮಿಸಲಾಗ ಕೃತ್ಯ ಇದಾಗಿದೆ ಎಂದು ಮಾತನಾಡಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಅವಮಾನಿಸುವ ಅಗೌರವ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.