ಕೆ.ಎಂ ದೊಡ್ಡಿ :-ರೈತರು ಹಳೆಯ ಕೃಷಿಚಟುವಟಿಕೆ ಪದ್ಧತಿಯನ್ನು ಮಾರ್ಪಾಡು ಮಾಡಿ ಹೊಸ ಕೃಷಿಪದ್ದತಿ ಅನುಸರಿಸಿ ಯಾಂತ್ರೀಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯಲಿ ಮುಂದುವರಿಯಲಿ ಎಂದು ಮದ್ದೂರು ಶಾಸಕ ಕೆ.ಎಂ ಉದಯ್ ತಿಳಿಸಿದರು.
ಕೆ.ಎಂ ದೊಡ್ಡಿ ಸಮೀಪದ ಕೆ.ಪಿ ದೊಡ್ಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 2025 ನೇ ಸಾಲಿನ ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಿತ ಸಂಯೋಜಿತ ಬೇಸಾಯ ಯೋಜನಡಿ ಪ್ರಾತ್ಯಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ನಮ್ಮ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ಅಧಿಕ ಪ್ರಮಾಣದ ನೀರನ್ನ ಬಳಕೆ ಮಾಡುತ್ತಾರೆ,ರೈತರು ಅಧಿಕ ಪ್ರಮಾಣದ ನೀರನ್ನ ಬಳಕೆ ಮಾಡುವುದ್ದನು ಕಡಿಮೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನೀರನ್ನು ಕಡಿಮೆ ಪ್ರಮಾಣದಲ್ಲಿ ಹನಿ ನೀರಾವರಿ ಯೋಜನೆಗಳ ಮೂಲಕ ಬಳಸಿ ಭೂಮಿಯ ಫಲವತ್ತತೆ ಮತ್ತು ಸಾರಾಂಶಗಳನ್ನು ಕಾಪಾಡಿಕೊಂಡು ಕೃಷಿಯಲ್ಲಿ ಅಧಿಕ ಲಾಭ ತರುವ ಕಾರ್ಯಕ್ಕೆ ಮುಂದಾಗಬೇಕು.
ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ,ಕೃಷಿ ಸಚಿವರು ನಮ್ಮ ಜಿಲ್ಲೆಯವರೆ ಆಗಿರುವುದ್ದರಿಂದ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ನೀಡಿದ್ದಾರೆ ಆ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗೆ ಅನುಗುಣವಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳು ಹಾಗೂ ಸಬ್ಸಿಡಿಯನ್ನು ಸಮರ್ಪಕವಾಗಿ ಬಳಸಿಕೊಂಡು ತಾಂತ್ರಿಕ ವಸ್ತುಗಳನ್ನು ಖರೀದಿಸಿ ಯಾಂತ್ರಿಕ ಬೇಸಾಯ ಕ್ರಮವನ್ನು ಅನುಸರಿಸಿ ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬೇಕು ಎಂದು ತಿಳಿಸಿದರು .
ಕೃಷಿ ಜೊತೆಗೆ ಹೈನುಗಾರಿಕೆ,ಹೆಚ್ಚಿನ ಆದ್ಯತೆ ನೀಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಹಾಗೆಯೇ ತೆಂಗು ಅಡಿಕೆ, ಬಾಳೆ, ತರಕಾರಿ ಬೆಲೆಗಳಂತಹ ವಿವಿಧ ಬಗೆಯ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಿಗೆ ಕರೆ ನೀಡಿದರು.
ನಮ್ಮ ಭಾಗದ ರೈತರು ತೆಂಗಿನ ಬೆಳೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು ಇಲಾಖೆಯ ಸಿಗುವಂತಹ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ತೆಂಗು ಬೆಳೆ ಅಭಿವೃದ್ಧಿಗೆ ಉತ್ತೇಜನ ದೊರೆತು ರೈತರಿಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಿಲಿದೆ ಮದ್ದೂರು ತಾಲೋಕಿನ ಜನತೆ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹೆಚ್ಚಿನ ಲಾಭ ಹೊಂದಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ನಂತರ ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಹನುಮಂತೇಗೌಡ ರವರು ಮಾತನಾಡಿ ಏಷ್ಯಾದ ದೊಡ್ಡ ಎಳನೀರು ಮಾರುಕಟ್ಟೆಯನ್ನು ಹೊಂದಿರುವ ಹೆಗ್ಗಳಿಕೆಗೆ ಹೊಂದುರುವ ನಮ್ಮ ಮದ್ದೂರಿನ ಎಳನೀರಿಗೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು ನಮ್ಮಮಂಡ್ಯ ಜಿಲ್ಲೆಯಲ್ಲಿರುವ ತೆಂಗಿನ ಮರಗಳು ಅಧಿಕ ಪ್ರಮಾಣ ಇಳುವರಿಯನ್ನ ನೀಡುವ ಮರಗಳಗಿವೆ ಆ ನಿಟ್ಟಿನಲ್ಲಿ ಎಳನೀರು ಹಾಗೂ ತೆಂಗಿನ ಕಾಯಿಗೆ ಹೆಚ್ಚಿನ ಬೇಡಿಕೆಯಾಗಿದೆ ಜಿಲ್ಲೆಯ ಹಾಗೂ ತಾಲೋಕಿನ ಜನತೆ ತೆಂಗು ಬೆಳೆಗೆ ಹೆಚ್ಚಿನ ಮಹತ್ವ ನೀಡಬೇಕು ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತೆಂಗಿನ ಬೆಳೆಗೆ ಹೆಚ್ಚಿನ ಸವಲತ್ತುಗಳನ್ನು ನೀಡಲಾಗುವುದು ಅವುಗಳನ್ನು ಇಲಾಖೆಯ ಅಧಿಕಾರಿಗಳ ಮೂಲಕ ಪಡೆದುಕೊಂಡು ಉತ್ತಮ ಬೆಳೆಗಳನ್ನು ಬೆಳೆದು ಅಧಿಕ ಲಾಭವನ್ನು ಗಲಿಸಬೇಕು ಎಂದು ತಿಳಿಸಿದರು .
ಇದೆ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ರೈತರಿಗೆ ಬೇವಿನ ಹಿಂಡಿ, ರಾಸಾಯನಿಕ ಗೊಬ್ಬರ ,ಸಲ್ಫ್ರೆಟ್ ,ಬೋರಾಕ್ಸ್,ಪಂಗಿಸೈಡ್ ಮತ್ತು ಮೈಕ್ರೋ ನ್ಯೂಟ್ರಿಯಂಟ್ ಗೊಬ್ಬರಗಳನ್ನು ಉಚಿತವಾಗಿ ವಿತರಿಸಲಾಯಿತು.
ಇದೆ ಸಂದರ್ಭದಲ್ಲಿ ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರವೀಶ್,ಹಿರಿಯ ತೋಟಗಾರಿಕೆ ಇಲಾಖೆ ರೇಖಾ,ಗ್ರಾಮ ಪಂಚಾಯಿತಿ ಸದಸ್ಯ ಗುಡಿಗೆರೆ ಮಂಜುನಾಥ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು..
ವರಧಿ ;- ಸಂತೋಷ್ ಟಿ.ಬಿ