Ticker

6/recent/ticker-posts

*ಆಸರೆ ಸೇವಾ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮದಿನ* *ಆಚರಣೆ*


 *ಕೆ.ಎಂ ದೊಡ್ಡಿ :-ಅ. 2 ರಾಷ್ಟ್ರನಾಯಕ ,ಶಾಂತಿದೂತ , ಅಹಿಂಸವಾದಿ ಮಹಾತ್ಮ ಗಾಂಧೀಜಿ  ಹಾಗೂ ಮಾಜಿ ಪ್ರಧಾನಿಯ ಶ್ರೇಷ್ಠ ಆಡಳಿತಗಾರ ಲಾಲ್ ಬಹದ್ದೂರ್ ಶಾಸ್ತ್ರಿರವರ ಆದರ್ಶಗಳನ್ನು ಅಳವಡಿಸಿಕೊಂಡು ಅವರ ತೋರಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಎಸ್  ಬೋರೇಗೌಡ ತಿಳಿಸಿದರು.

ಕೆ.ಎಂದೊಡ್ಡಿಯ ಆಸರೆ ಸೇವಾ ಟ್ರಸ್ಟ್ ವತಿಯಿಂದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ರವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು 

ಮಹಾತ್ಮ ಗಾಂಧೀಜಿರವರು   ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾನ್ ಸಾಧಕ  ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ.ಜಗದ ಕಷ್ಟಗಳಿಗೆಲ್ಲ ಮರುಗುತ್ತಿದ್ದ ಬಾಪುವಿನ ಹೃದಯದೊಳಗೆ ಅದೆಷ್ಟು ಕರುಣೆ, ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ ಎಂದರು 
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀರವರು ಸರಳ ಸಜ್ಜನಿಕ ದಕ್ಷ ಆಡಳಿತಗಾರರಾಗಿ ಸೇವೆ ಸಲ್ಲಿಸಿ  ಜನಮಾನಸದಲ್ಲಿ ಅಜರಾಮರಾಗಿ ಉಳಿದಿದ್ದಾರೆ ಎಂದು ತಿಳಿಸಿದರು.

ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೆಗೌಡ ಮಾತನಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿರವರು ಸತ್ಯ, ಶಾಂತಿ, ಸಹನೆ, ಸರ್ವಧರ್ಮ ಸಮಭಾವ ಚಿಂತನೆಗಳಾಗಿದ್ದು, ಅದು ಅವರ  ಜೀವನ ಅನುಕರಣೆಯ  ಮಾರ್ಗವಾಗಿತ್ತು. ಜಗತ್ತಿಗೆ ಶಾಂತಿ  ಆಹಿಂಸೆ ಮಾರ್ಗಗಳ ಬಗ್ಗೆ ಜಗತ್ತಿಗೆ ತೋರಿಸಿದ ಮಹಾನ್ ಚೇತನ ಎಂದರು ಇಂದು ಮಹಾತ್ಮ ಗಾಂಧಿಯವರ ಜನ್ಮದಿನ ಅವರ ಸೇವೆ, ಸಮರ್ಪಣಾಭಾವ,ತ್ಯಾಗ, ಬಲಿದಾನವನ್ನು ಅತ್ಯಂತ ಗೌರವದಿಂದ ಸ್ಮರಿಸಿ ಸಾಗತ್ತೆವೆ ಎಂದು ತಿಳಿಸಿದರು.ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀರವರು ಒಬ್ಬ ಶ್ರೇಷ್ಠ ಸರಳ ಸಜ್ಜನಿಕೆಯುಳ್ಳ ಆಡಳಿತಗಾರರಾಗಿ ಸೇವೆ ಸಲ್ಲಿಸಿ "ಜೈ ಜವಾನ್ ಜೈ ಕಿಶಾನ್" ಎಂಬ ಧೈಯ್ಯದೊಂದಿಗೆ ರಾಷ್ಟ್ರದಲ್ಲಿ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ವೀರೇಂದ್ರ, ಪ್ರಗತಿಪರ ಸಂಘಟನೆಯ ಕರಡಕೆರೆ ಯೋಗೇಶ್,ಆಸರೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಸಂತೋಷ್, ರಂಜಿತ್ ಗೌಡ ಕನ್ನಡ ಸೇನೆ ರಾಘವೇಂದ್ರ, ಖಜಾಂಚಿ ವಿಕಾಸ್ ಗೌಡ,ಶಂಕರ್,ರೇಣು,ಜಯಸ್ವಾಮಿ,ಮೋಹನ್ ,ತನುಪ್ರಸಾದ್,ಸೇರಿದಂತೆ ಹಲವರು ಉಪಸ್ಥಿತರಿದ್ದರು..

 *ವರಧಿ :- ಸಂತೋಷ್ ಟಿಬಿ*