ಗುಂಡ್ಲುಪೇಟೆ:-ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಕ್ರಮ ಕೈಗೊಳ್ಳಬೇಕು. ಹಾನಿ ಅಗಿರುವ ನಷ್ಟ ಪರಿಹಾರ ಕೋರಿ ಶಿವಪುರ ರೈತರು ಸಿ ಎಪ್ ಪ್ರಭಾಕರನ್ ರವರಿಗೆ ಮನವಿ ಸಲ್ಲಿಸಿದರು
ರೈತ ಮುಖಂಡರು ಶಿವಪುರ ಗ್ರಾಮದ ಸುತ್ತ ಮುತ್ತ ಜಮೀನು ಗಳಿಗೆ ಸುಮಾರು ಎರಡು ತಿಂಗಳಿಂದ ಸತತವಾಗಿ ರೈತರ ಜಮೀನನಲ್ಲಿ ಬೆಳೆ ಹಾನಿ ಮಾಡುತ್ತಿದ್ದು ಇದಕ್ಕೆ ಕಾರಣ ಅರಣ್ಯ ಇಲಾಖೆಯವರ ನಿರ್ಲಕ್ಷತೆಯಿಂದ ಪ್ರಾಣಿಗಳು ಹಾವಳಿ ಹೆಚ್ಚಾಗಿದೆ.
ಇದರಿಂದ ಬೆಳೆ ನಷ್ಟವಾಗಿದೆ ಬೆಳೆ ಪರಿಹಾರ ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ ತಂತಿ ಬೇಲಿ ಚಾರ್ಜ್ ಇಲ್ಲದ ಕಾರಣ ಕಂದಕ ನಿರ್ಮಾಣ ಮಾಡದಿರುವ ಕಾರಣಕ್ಕೆ ದಿನ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಅರಣ್ಯ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಿವಪುರ ಗ್ರಾಮಸ್ಥರು ಮನವಿ ಪತ್ರವನ್ನು ಅರಣ್ಯ ಅಧಿಕಾರಿಗಳಿಗೆ ನೀಡಲಾಯಿತು