Ticker

6/recent/ticker-posts

ಮೈಸೂರು ದಸರಾ: ದ.ಕ. ಜಿಲ್ಲೆಗೆ ದ್ವಿತೀಯ ಪ್ರಶಸ್ತಿ


ಮಂಗಳೂರು :ಅಕ್ಟೋಬರ್ 2 ರಂದು ನಡೆದ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಕಲೆ ಸಂಸ್ಕೃತಿ ಸಂಪ್ರದಾಯಿಕ ಕ್ರೀಡೆ ಯನ್ನು ಪ್ರತಿಬಿಂಬಿಸುವ ಟ್ಯಾಬ್ಲೋ  ಪ್ರದರ್ಶನ ಮಾಡಿದ್ದು ಜಿಲ್ಲೆಗೆ 2 ನೇ ಪ್ರಶಸ್ತಿ ಬಂದಿರುತ್ತದೆ. 
ಯಕ್ಷಗಾನ, ಕಂಬಳ, ಹುಲಿವೇಷ ಮತ್ತಿತರ ಸಾಂಪ್ರದಾಯಿಕ ಮತ್ತು ಜಾನಪದ ಕ್ರೀಡೆಗಳ ವಿಷಯಗಳನ್ನು ಈ ಟ್ಯಾಬ್ಲೋದಲ್ಲಿ ಪ್ರದರ್ಶಿಸಲಾಗಿತ್ತು.
ಜಿಲ್ಲಾಪಂಚಾಯತ್ಮುಖ್ಯಕಾರ್ಯನಿರ್ವಾಹಣಾಧಿರವರ    ಮಾರ್ಗದರ್ಶನದಲ್ಲಿ ಟ್ಯಾಬ್ಲೋ ನಿರ್ಮಿಸಲಾಗಿತ್ತು. ನೋಡಲ್ ಅಧಿಕಾರಿಯಾಗಿ ಗ್ರಾಮೀಣ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರು ಮಂಜುನಾಥ್ ಹೆಗಡೆ   ಕಾರ್ಯ ನಿರ್ವಹಿಸಿರುತ್ತಾರೆ.