ನಾಗಮಂಗಲ. ಏ. 3 ಡಾ ಶಿವಕುಮಾರ ಸ್ವಾಮೀಜಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಭಾವನಾತ್ಮಕವಾಗಿ ಜನಮಾನಸದಲ್ಲಿ ನಿತ್ಯ ಸಂಜೀವಿನಿ ಮಹಾನ್ ದಾರ್ಶನಿಕರಾದ ಸಿದ್ದಗಂಗಾ ಶ್ರೀಗಳು ಜನಮಾನಸದಲ್ಲಿ ಉಳಿದಿದ್ದಾರೆ ಎಂದು ನಾಗಮಂಗಲ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಪರಮೇಶ್ ತಿಳಿಸಿದರು.
ಅವರು ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕಚೇರಿಯಲ್ಲಿ ಸಿದ್ದಗಂಗಾ ಮಠದ ಶಿವ್ಯಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶ್ರೀಗಳು ಯಾವುದೇ ಜಾತಿ ಮತ ಧರ್ಮ ವರ್ಣಭೇದ ಲೆಕ್ಕಿಸದೆ ಲಕ್ಷಾಂತರ ಮಂದಿ ಬಡ ವಿದ್ಯಾರ್ಥಿಗಳಿಗೆ ಜ್ಞಾನದ ಬದುಕನ್ನು ಕಟ್ಟಿರುವ ಸಿದ್ದಗಂಗಾ ಶ್ರೀಗಳು ವಿಶ್ವ ಜ್ಞಾನದೇಗುಲಕ್ಕೆ ತಮ್ಮದೇ ಆದ ಕಾಯಕ ನೀಡುವ ಮುಖಾಂತರ ನಿತ್ಯ ನಿರಂತರವಾಗಿ ಜನಮಾನಸದಲ್ಲಿ ಉಳಿದಿದ್ದಾರೆ.
ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರಂತೆ ನಾಡಿಗೆ ಧಾರ್ಮಿಕ ಸಾಮಾಜಿಕ ಶೈಕ್ಷಣಿಕವಾಗಿ ನೀಡಿರುವ ಅವರ ಸೇವೆಗಳು ಇಂದಿಗೂ ಎಲ್ಲರ ಮನದಲ್ಲಿದ್ದು ಅಂಥವರ ಆದರ್ಶ ಸೇವಾ ಕಾರ್ಯಗಳನ್ನು ನಾವುಗಳು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನೀಲಕಂಠನಹಳ್ಳಿ ಬಸಪ್ಪಾಜಿ. ನಿರ್ದೇಶಕರಾದ ನಾಗರಾಜ್ ಬಸವರಾಜು. ಸಿದ್ದಲಿಂಗಯ್ಯ. ಕಲ್ನನಾಥಪುರ ಶಿವಕುಮಾರ್. ಕುಮಾರಸ್ವಾಮಿ.ಬಸವರಾಜು ಹಾಗೂ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು