ಮಂಡ್ಯ ಜಿಲ್ಲೆಯ ಆಸ್ಪತ್ರೆಯ ಅಲ್ಲಿನ ವ್ಯವಸ್ಥೆ ಬಗ್ಗೆ ಹಾಗೂ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯಗಳ ಬಗ್ಗೆ ಆಸ್ಪತ್ರೆಯ ಅದಿಕ್ಷ ಕರ ಜೊತೆ ಚರ್ಚಿಸಿದರು. ನಂತರ ಆಸ್ಪತ್ರೆಯ ಒಳಬಾಗದಲ್ಲಿ ಒಂದು ಸುತ್ತು ಹೊರಟು ಒಳರೋಗಿಗಳು ಮತ್ತು ಹೋರರೋಗಿಗಳ ವಿಚಾರ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದಂತಹ ರೋಗಿಗಳು ಹಾಗೂ ಅವರ ಜೊತೆ ಬಂದಿರುವಂತಹ ಸಂಬಂಧಿಕರು ಆಸ್ಪತ್ರೆಯಲ್ಲಿ ಅವಶ್ಯಕತೆ ಇರುವಂತಹ ಚಿಕಿತ್ಸೆ ಉಪಕರಣಗಳು ಹಾಗೂ ಸೌಲಭ್ಯಗಳ ಬಗ್ಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ರವರಿಗೆ ಮಾಹಿತಿಯನ್ನು ನೀಡಿ,ಇಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೋಗಿಗಳು ಬರುತ್ತಿರುವುದರಿಂದ ಇಲ್ಲಿನ ಸೌಲಭ್ಯಗಳು ಇನ್ನು ಹೆಚ್ಚು ಆಗಬೇಕೆಂಬುದನ್ನು ಜನರು ಕುಮಾರಸ್ವಾಮಿ ಕೋರಿಕೊಂಡರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಅಧಿಕಾರಿಗಳು ಕುಮಾರ್ ರವರು ಹಾಗೂ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಧಿಕಾರಿಗಳು ಜೊತೆಯಲ್ಲಿದ್ದು ಆಲಿಸಿದರು.
