Ticker

6/recent/ticker-posts

*ನಾಗಮಂಗಲ ಕ್ಷೇತ್ರ ಅಭಿವೃದ್ಧಿಯ ವಿಶೇಷ ಆದ್ಯತೆ ಸಚಿವ ಚೆಲುವರಾಯಸ್ವಾಮಿ*

ಗ್ಯಾರೆಂಟಿ ಗ್ಯಾರೆಂಟಿ ಮುಂದುವರಿಕೆ. ಅಭಿವೃದ್ಧಿ ಅಭಿವೃದ್ಧಿ ವಿಚಾರವೆ ಮುಂದುವರಿಕೆ ಸರ್ಕಾರದ 
ಭರವಸೆ

ನಾಗಮಂಗಲ.ಏ. 7 ನಾಗಮಂಗಲ ಕ್ಷೇತ್ರದ ಅಭಿವೃದ್ಧಿಯ ಆದ್ಯತೆಗೆ ವಿಶೇಷ ಗಮನ ನೀಡುವ ಮುಖಾಂತರ ಹೆಚ್ಚಿನ ಆಸಕ್ತಿ ವಹಿಸುವುದಾಗಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಅವರು ಇಂದು ನಾಗಮಂಗಲ ಪಟ್ಟಣದ ಸೌಮ್ಯಕೇಶವ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಆಯೋಜನೆ ಮಾಡಿದ್ದ 10 ಕೋಟಿ ರೂ ವೆಚ್ಚದ ಕೇಬಲ್ ಅಳವಡಿಕೆಯ ಕಾಮಗಾರಿ ಉದ್ಘಾಟನೆ ಮಾಡುತ್ತಾ ಮಾತನಾಡಿದರು.
ನಾಗಮಂಗಲ ವಿದ್ಯುತ್ ಇಲಾಖೆ ಯ ನೂತನ ಕೇಬಲ್ ಯೋಜನೆ ಮಹತ್ವಾಕಾಂಕ್ಷೆ ಕೆಲಸವಾಗಿದ್ದು ಇದರಿಂದ ಯಾವುದೇ ರೀತಿಯ ಪರಿಣಾಮಗಳ ಇಲ್ಲದೆ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಕೇಬಲ್ ಅಳವಡಿಸುವುದು ಮತ್ತು ಮುಂದುವರಿಕೆಯ ಕಾರ್ಯಕ್ರಮ ವಾಗಿದ್ದು ಕೇವಲ ಪೂಜೆ ಮಾಡಿ ಹೋಗುವ ಕಾರ್ಯಕ್ರಮ ಬಿಟ್ಟು ಮಾಡಿ ತೋರಿಸಿ ಕೆಲಸ ಸಾರ್ವಜನಿಕರ ತಿಳುವಳಿಕೆಯಾಗಬೇಕಾಗಿರುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಏಳು ಕ್ಷೇತ್ರದಲ್ಲೂ ಸೋತಾಗ ನನ್ನ ಅಧಿಕಾರ ಅವಧಿಯಲ್ಲಿ ಮಂಜೂರಾತಿಯಾಗಿ ನಿಂತು ಆಗದೆ ಇರುವುದು ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನಾಯಕರು ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ಆದ್ಯತೆ ನೀಡಿದೆ ಇರುವುದು ವಿಪರ್ಯಾಸವಾಗಿದೆ.
ಅಭಿವೃದ್ಧಿಗೆ ಮುಂದುವರೆದು ವಿದ್ಯುತ್ ಏಳು ಉಪ ಕೇಂದ್ರಗಳು ಅತಿ ಶೀಘ್ರದಲ್ಲಿ ಮಂಜೂರಾತಿ ಸಿಗಲಿದ್ದು ಹಾಗೂ ನೀರಾವರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು ಸಾರ್ವಜನಿಕರು ಟೀಕಾಕಾರರು ಏನೇ ಹೇಳಿದರು ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಸಾಕ್ಷಿಭೂತವಾಗಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಹಾಲು ಒಕ್ಕೂಟ ನಿರ್ದೇಶಕರಾದ ಅಪ್ಪಾಜಿಗೌಡ. ಇಲಾಖೆಯ ಅಧಿಕಾರಿಗಳಾದ ಮಂಜುನಾಥ್.ತಿಲಕ್ ಮಹಾದೇವ್. ಆನಂದ್ ಮತ್ತು ಸಿಬ್ಬಂದಿ ವರ್ಗ. ದಿನೇಶ್ ಹಾಗೂ ಪುರಸಭಾ ಸದಸ್ಯರಾದ ಸಂಪತ್. ರಮೇಶ್. ತಿಮ್ಮಪ್ಪ ಹಾಗೂ ಮುಖಂಡರು ಗಣ್ಯರು ಹಾಜರಿದ್ದರು.