Ticker

6/recent/ticker-posts

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಭೀಮನಗರದಲ್ಲಿ ಮನೆ ಮನೆಗೂ ಆಹ್ವಾನ ಪತ್ರಿಕೆ

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಲ್ಲಿ ಭೀಮನಗರ ವತಿಯಿಂದ ನಾಲ್ಕು ದಿನಗಳ ಕಾಲ ಆಯೋಜಿಸಿರುವ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಇಂದು ಬೆಳಿಗ್ಗೆ ಆಹ್ವಾನ ಪತ್ರಿಕೆ ನೀಡುವ ಕಾರ್ಯಕ್ರಮ ನಡೆಯಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಯನ್ನು ಮನೆ ಮನೆ ಹಬ್ಬವಾಗಿ ಆಚರಣೆ ಮಾಡಬೇಕು, ಕುಟುಂಬದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.

ಜಯಂತಿ ಮಹೋತ್ಸವ ಸಮಿತಿ ಸಂಚಾಲಕರುಗಳಾದ ಪುಟ್ಟಲಿಂಗಯ್ಯ, ರಾಜಶೇಖರ್, ಹುಚ್ಚಯ್ತ, ಸನತ್ ಕುಮಾರ್, ಮಹದೇವಸ್ವಾಮಿ, ಆನಂದ್ ಸಿದ್ದಯ್ಯ, ಸೇರಿದಂತೆ ಎಲ್ಲರೂ ಭೀಮನಗರ ಹುಚ್ಚಮ್ಮನ ಗುಡಿಯಿಂಸ ಶನಿವಾರ  ಮತ್ತು ಭಾನುವಾರ ಬೆಳಿಗ್ಗೆ ಯಿಂದಲೇ ಎಲ್ಲಾ ಬೀದಿಗಳಿಗೆ ತೆರಳಿ ಪ್ರತಿ ಮನೆಗೂ ಆಹ್ವಾನ ಪತ್ರಿಕೆ ನೀಡಿದರು