Ticker

6/recent/ticker-posts

*ನಾಗತಿಹಳ್ಳಿಯ ಸಾಂಸ್ಕೃತಿಕ ಹಬ್ಬ ಶತಮಾನದ ಶಾಲಾ ಸಂಭ್ರಮ*


ನಾಗಮಂಗಲ :ಎ. ನಾಗತಿಹಳ್ಳಿ ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿದ್ದು  ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮವಿದೆ.

ಈ ಗ್ರಾಮದಲ್ಲಿ 1925ರಲ್ಲಿ ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾರಂಭವಾಗಿ ಇಲ್ಲಿಗೆ ನೂರು ವರ್ಷಗಳ ಪೂರೈಸಿ ಶತಮಾನದ ಶಾಲೆ ಎಂಬ ಹೆಸರಿನಲ್ಲಿ ಸಂಭ್ರಮದ ಗುರುತಾಗಿದೆ.

 ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಕೆಲಸದಲ್ಲಿದ್ದು ಶಿಕ್ಷಕರಾಗಿ ಸೇವಿಸಲ್ಲಿಸಿದ್ದು ಇದೇ ಗ್ರಾಮದವರು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ರಾಜ್ಯ ರಾಷ್ಟ್ರಮಟ್ಟದವರಿಗೂ ಹೆಸರುಗಳಿಸಿದ್ದಾರೆ ಅಂತಹ ಗ್ರಾಮ ಶಾಲೆಯ ಸಂಸ್ಕೃತಿ ಉಳಿಯುವಂತೆ ಮಾಡಿದೆ.

ಈ ಶಾಲೆಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸುಮಾರು 20 ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಕ್ರಿಯಾಶೀಲ ಚಟುವಟಿಕೆಗಳು 21ನೇ ಸಂಸ್ಕೃತಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 26 ರಿಂದ 30ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

 ಶಾಲೆಯ ಶತಮಾನ ಸಂಭ್ರಮ ಆಚರಣೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿಗಳು ಸಚಿವರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ