ಕೊಳ್ಳೇಗಾಲ. ತಾಲ್ಲೂಕಿನ ಸಿಲ್ಕಲ್ ಪುರ ಗ್ರಾಮದಿಂದ ಕೂಲಿಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ಕಾಣೆಯಾಗಿರುವ ಘಟನೆ ಜರುಗಿದೆ.
ಸಿಲ್ಕಲ್ ಪುರ ಗ್ರಾಮದ ವಾಸಿ ಮಹದೇವಯ್ಯ ಎನ್ನುವರ ಮಗನಾದ ಮಹೇಶ್(33) ಎಂಬಾತ ಕಾಣೆಯಾದ ಕೂಲಿ ಕಾರ್ಮಿಕ.
ಈತನು ಮಾ.18 ರಂದು ಗಾರೆ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋದವನು ಇದುವರೆಗೂ ವಾಪಸ್ಸು ಬಾರದ ಹಿನ್ನಲ್ಲೆ ಕಾಣೆಯಾದ ಮಹೇಶ್ ನನ್ನು ಪತ್ತೆಮಾಡಿಕೊಡುವಂತೆ ತಾಯಿ ಪುಟ್ಟಸಿದ್ದಮ್ಮ ಪೊಲೀಸರಿಗೆ ದೂರಿನ ಮೂಲಕ ಮನವಿ ಮಾಡಿದ್ದಾರೆ.
ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ನಾಪತ್ತೆಯಾಗಿರುವ ಕೂಲಿಕಾರ್ಮಿಕನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
*ವ್ಯಕ್ತಿಯ ಚಹರೆ*
ಮಹೇಶ್ 33 ವರ್ಷ, ಎತ್ತರ 6 ಅಡಿ, ದುಂಡುಮುಖ, ಕಪ್ಪು ಮೈಬಣ್ಣ ಸಾಧಾರಣ ಮೈ ಕಟ್ಟು, ಕಪ್ಪು ತಲೆ ಕೂದಲು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರ ಹೋಗುವಾಗ ಆಕಾಶ್ ಬಣ್ಣದ ತುಂಬುತೋಳಿನ ಶರ್ಟ್ ಧರಿಸಿರುತ್ತಾನೆ.
ಈತನ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಠಾಣಾ ಪೋ.ನಂ 08224-295176, ಪಿಎಸ್ಐ ಮೋ. ನಂ 9480804654 ಕರೆ ಮಾಡತಕ್ಕದ್ದು ಎಂದು ಪೊಲೀಸರು ಮನವಿ ಮಾಡಿದ್ದಾರೆ.