ನಾಗಮಂಗಲ. ಏ:- 9 ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭವ್ಯವಾದ ಪದವಿ ಪ್ರದಾನ ಸಮಾರಂಭ - 2025
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆದಿಚುಂಚನಗಿರಿ ವೈದ್ಯಕೀಯ ಮತ್ತು ಆಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯು ಬಿಜಿಎಸ್ ಸಭಾಂಗಣದಲ್ಲಿ ಭವ್ಯವಾದ ಪದವಿ ಪ್ರದಾನ ಸಮಾರಂಭ - 2025 ಅನ್ನು ಆಯೋಜಿಸಿತ್ತು.
ಈ ಸಮಾರಂಭವು ಪರಮಪೂಜ್ಯ ಜಗದ್ಗುರು *ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ* ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಅವರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಗೌರವ ಕುಲಪತಿ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್.
ಈ ಸಮಾರಂಭವು ಪರಮಪೂಜ್ಯ *ಶ್ರೀ ಶ್ರೀ ಪುರುಷೋತ್ತಮನಂದನಾಥಸ್ವಾಮಿಜಿಯವರ*
ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು,
ಪೂಜ್ಯರು ನೆರೆದಿದ್ದ ಎಲ್ಲ ವೈದ್ಯಕೀಯ ಪದವಿ ಪಡೆದ ಎಲ್ಲರಿಗೂ ಶುಭ ಕೋರಿದರು. ಹಾಗೂ ಶ್ರೀ ಮಠದ ಸಾಮಾಜಿಕ ಕ್ಷೇತ್ರಗಳಾದ ಆರೋಗ್ಯ, ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದೆ, ಆರೋಗ್ಯ ಪ್ರತಿಯೊಬ್ಬರಿಗೂ ಅತಿ ಅಮೂಲ್ಯ ಭಾಗ್ಯ ಎಂದು ಹಿತ ನುಡಿದರು.
ಮುಖ್ಯ ಅತಿಥಿಗಳು:
ಶ್ರೀ ಹರ್ಷ ಗುಪ್ತಾ ಐಎಎಸ್, ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ರವರು ಮಾತನಾಡಿ ವೈದಕೀಯ ಪದವೀಧರಿಗೆ ಶುಭ ಕೋರಿ, ವೃತ್ತಿ ಜೀವನದಲ್ಲಿ ನೈತಿಕತೆ ಹೆಚ್ಚು ಪರಿಣಾಮವಿದೆ, ಸಮಸ್ಯೆಯ ಆಳ ಅಗಲದ ಸಂಪೂರ್ಣ ಅರಿವಿಂದ ಪರಿಹಾರ ಸಾಧ್ಯ ಎಂದು ತಿಳಿಸಿ ವೈದ್ಯಕೀಯ ಆಡಳಿತದ ಕುರಿತ ಸಲಹೆಗಳನ್ನು ಹೇಳಿದರು.
ಡಾ. ಬಿ ಸಿ ಭಗವಾನ್*, ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ರವರು ಮಾತನಾಡಿ ವೈದಕೀಯ ಪದವೀಧರಿಗೆ ಮುಂದಿನ ವೈದ್ಯಕೀಯ ಜೀವನದ ಅಭ್ಯಾಸ ಮತ್ತು ಕಲಿಕೆ ಕುರಿತು ಕೆಲ ಅನಿಸಿಕೆಗಳನ್ನು ತಿಳಿಸಿದರೂ.
*ಡಾ. ಎಂ ಜಿ ಶಿವರಾಮು* (ಪ್ರಿನ್ಸಿಪಾಲ್ & ಡೀನ್, ಹೆಲ್ತ್ ಸೈನ್ಸಸ್ – ಮೆಡಿಕಲ್) ಕಾರ್ಯಕ್ರಮ ಅತಿಥಿಗಳನ್ನು ಸ್ವಾಗತಿಸಿ, ಪದವಿ ಪಡೆದ ಪದವೀಧರರಿಗೆ ಅಭಿನಂದನೆ ಕೋರಿದರು.*
ಡಾ. ಎಂ ಎ ಶೇಖರ್*, ಕುಲಪತಿ, ಆದಿಚುಂಚನಗಿರಿ ವಿಶ್ವವಿದ್ಯಾಲಯ ರವರು ಮಾತನಾಡಿ ಪದವಿ ಪಡೆದ ವೈದ್ಯಕೀಯ ಪದವೀಧರರಿಗೆ ಅಭಿನಂದನೆ ಸಲ್ಲಿಸಿ, ವೈದ್ಯಕೀಯ ಸೇವೆಗಳ ಬಗ್ಗೆ ಹಿತವಚನ ನೀಡಿ ಕುಟುಂಬದ ಸದಸ್ಯರಿಗೆ ವಿದೆಯವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿಶ್ರೀ ಡಿ ದೇವರಾಜ್ ಟ್ರಸ್ಟಿ, ಆದಿಚುಂಚನಗಿರಿ ಮಠ
ಡಾ. ಸಿ ಕೆ ಸುಬ್ಬರಾಯ*, ರೆಜಿಸ್ಟ್ರಾರ್, ಆದಿಚುಂಚನಗಿರಿ ವಿಶ್ವವಿದ್ಯಾಲಯ.
ಕಾರ್ಯಕ್ರಮದಲ್ಲಿ
ಡಾ. ಕೆ ಎಂ ಶಿವಕುಮಾರ್* ಮುಖ್ಯಸ್ಥರು ಆದಿಚುಂಚನಗಿರಿ ಅಸ್ವತ್ರೆ .
*ಡಾ.ರಮೇಶ್* ಅಕಾಡೆಮಿಕ್ ಡೀನ್ ಆದಿಚುಂಚನಗಿರಿ ವಿಶ್ವವಿದ್ಯಾಲಯ.
*ಶ್ರೀ ಉಮೇಶ್ ಬಿ ಕೆ*, ಹಣಕಾಸು ಮುಖ್ಯಸ್ಥರು ಆದಿಚುಂಚನಗಿರಿ ವಿಶ್ವವಿದ್ಯಾಲಯ.
*ಶ್ರೀ ಚಂದ್ರನ್ ರಾಜ್ ಸಿ ಎನ್* ಆಡಳಿತಾಧಿಕಾರಿ ಏಮ್ಸ್.
ಈ ಕಾರ್ಯಕ್ರಮದಲ್ಲಿ ಅಧಿಕ ಅಂಕ ಪಡೆದ ಹಾಗೂ ಉತ್ತಮ ಸಾದನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ನಿರ್ಮಿಸಲು ಈ ಪದವಿ ಪ್ರದಾನ ಸಮಾರಂಭ ವಿದ್ಯಾರ್ಥಿಗಳಿಗೆ ಪ್ರೇರಣೆಯಾಕವಾಗಿದ್ದು, 148 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ವಿಜ್ಞಾನ ವಿಭಾಗದಲ್ಲಿ 34 ವಿದ್ಯಾರ್ಥಿಗಳಿಗೆ ಪದವಿ ಪ್ರದಾನದಲ್ಲಿ ಎಲ್ಲರಲ್ಲೂ ಉತ್ಸಾಹ ಮತ್ತು ಹೆಮ್ಮೆಯ ಭಾವನೆ ಉಂಟುಮಾಡಿತು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕರೂ ಸೇರಿ ಸಾವಿರಾರು ಮಂದಿ ಹಾಜರಿದ್ದರು.
