Ticker

6/recent/ticker-posts

ನಾಗಮಂಗಲದಲ್ಲಿ ಅದ್ದೂರಿ ಗರುಡೋತ್ಸವ


 ನಾಗಮಂಗಲ: ಗಾಣಿಗರ ಸಂಘದ ವತಿಯಿಂದ ನಾಗಮಂಗಲದ ಐತಿಹಾಸಿಕ ಮಹತ್ವವುಳ್ಳ ಸೌಮ್ಯ ಕೇಶವ ಸ್ವಾಮಿ ದೇವಸ್ಥಾನದಲ್ಲಿರುವಂತಹ ಗರುಡು ದೇವರ ಉತ್ಸವವನ್ನು ಪ್ರತಿವರ್ಷ ಯುಗಾದಿ ಎಂದು ಸಂಜೆ ವೈಭವದಿಂದ ಆಚರಿಸಲಾಯಿತು.
ನಾಗಮಂಗಲದ ಗಾಣಿಗರ ಸಂಘದ ವತಿಯಿಂದ ಹಲವಾರು ತಲೆಮಾರುಗಳಿಂದ  ಈ ಗರುಡೋತ್ಸವವನ್ನು ನಾಗಮಂಗಲದ ಗಾಣಿಗ ಸಮಾಜದವರು ಪ್ರತಿ ವರ್ಷ ಯುಗಾದಿ ಹಬ್ಬದಂದು ಅತಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರತಿ  ವರ್ಷ ದೊಣ್ಣೆ ವರಸೆ , ಬೆಂಕಿ ತಿರುಗಿಸುವಿಕೆ ಹಾಗೆ ನೃತ್ಯ ದೊಂದಿಗೆ ಸಂಭ್ರಮ  ಸಡಗರದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು,

ಈ ವರ್ಷ ಅತಿ ವೈಭವಿತವಾಗಿ ಗರುಡೋತ್ಸವವನ್ನು ನಡೆಸಿ ಭಕ್ತಾದಿಗಳಿಗೆ ವಿಶೇಷವಾಗಿ ಪುಳಿಯೋಗರೆಯನ್ನು ನೀಡುತ್ತಾ ಅತಿ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು ಸಹಸ್ರಾರು ಸಂಖ್ಯೆಯಲ್ಲಿ ನಾಗಮಂಗಲ ಮತ್ತು ಸುತ್ತಮುತ್ತಲಿನ ಊರುಗಳಿಂದ ಬಂದಂತಹ ಭಕ್ತಾದಿಗಳು ಗರುಡುಗಂಬದ ಮೇಲಿನ ದೀಪ ಹಚ್ಚುವಿಕೆಯನ್ನು ನೋಡಿ ಅತಿ ಸಂಭ್ರಮದಿಂದ,ಭಕ್ತಿಯಿಂದ ಭಗವಂತನ ದರ್ಶನ ಮಾಡಿದರು.