ನಾಗಮಂಗಲ. ಏ: 10 ಸರ್ಕಾರದ ಕೃಷಿ ಯೋಜನೆಗಳನ್ನು ರೈತರು ಸಕಾಲದಲ್ಲಿ ಸದ್ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಸಹಕಾರವಾಗುತ್ತದೆ ಎಂದು ಕೃಷಿ ಸಚಿವರಾದಚೆಲು ವರಾಯಸ್ವಾಮಿಯವರು ಕರೆ ನೀಡಿದರು.
ಅವರು ಇಂದು ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿ ಎಲ್ಲಿ ಏರ್ಪಡಿಸಿದ್ದ ಜಿಲ್ಲಾ ಪಂಚಾಯತ್ ಮಂಡ್ಯ ತಾಲೂಕು ಪಂಚಾಯಿತಿ ನಾಗಮಂಗಲ ಕೃಷಿ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ಯ ಮಂಡ್ಯ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿಕವಚ ಕಾರ್ಯಕ್ರಮದ ಯೋಜನೆ ಅಡಿ ಕಂದಕ ಬದು ಕಾಮಗಾರಿ ಚಾಲನೆ ನೀಡುತ್ತಾ ಮಾತನಾಡಿದರು.
ರೈತರು ತಾವು ಬೆಳೆಗಳನ್ನು ಬೆಳೆಯಲು ಸಕಾಲದಲ್ಲಿ ಮಳೆ ಇರದ ಕಾರಣ ಸರಕಾರದ ವತಿಯಿಂದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಧನ ಸಹಾಯಗಳ ನೀಡುವ ಮುಖಾಂತರ ನೀರಿನ ಸಂಗ್ರಹಣೆ ಮಾಡಿ ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವ ಮುಖಾಂತರ ಕೃಷಿ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಲ್ಲಿ ನೀರಿನ ಸಂಗ್ರಹಣೆ ಮಾಡಿಕೊಂಡು ಬೆಳೆಗಳನ್ನು ಬೆಳೆಯಲು ಸಹಕಾರವಾಗುತ್ತದೆ ಎಂದು ಮಾತನಾಡಿದರು.
ತಮ್ಮ ಕೃಷಿ ಭೂಮಿಯ ಹೊಲದಲ್ಲಿ ಬದು ನಿರ್ಮಾಣದಿಂದ ಹೆಚ್ಚು ಇಳುವರಿ ಪಡೆದುಕೊಳ್ಳಬಹುದು ಇದರಿಂದ ಮಳೆ ನೀರನ್ನು ತಡೆಹಿಡಿದು ನೀರಿನ ಶೇಖರಣೆ ಮಾಡಿಕೊಂಡರೆ ಭೂಮಿಯ ಫಲವತ್ತತೆ ಹೆಚ್ಚಾಗಿ ಇಳುವರಿಯು ಕೂಡ ಹೆಚ್ಚಾಗುತ್ತದೆ ಜೊತೆಗೆ ನೀರಿನಅಭಾವ ಕೂಡ ತಡೆಹಿಡಿಯಲು ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮಂಡ್ಯ ಜಿಲ್ಲೆಯು 27ನೇ ಸ್ಥಾನದಲ್ಲಿದ್ದು ಈ ಯೋಜನೆ ನಮ್ಮ ಜಿಲ್ಲೆಯಲ್ಲಿ ರೈತರಿಗೆ ಹೆಚ್ಚು ಹೆಚ್ಚು ಮಾಹಿತಿ ನೀಡುವ ಮುಖಾಂತರ ಯೋಜನೆಗಳನ್ನು ಬಳಸಿಕೊಂಡು ರೈತರಿಗೆ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಇಲಾಖಾಧಿಕಾರಿಗಳಿಗೂ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಕೃಷಿ ಜಂಟಿ ನಿರ್ದೇಶಕರಾದ ಅಶೋಕ್ ಕುಮಾರ್. ಕಾರ್ಯನಿರ್ವಹಣಾಧಿಕಾರಿ ಸತೀಶ್. ಇಲಾಖಾ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಮುಖಂಡರು ಹಾಜರಿದ್ದರು.
