ಚನ್ನರಾಯಪಟ್ಟಣ ತಾಲೋಕಿನ ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ಹರೀಶ್ ರವರು JDS ತೊರೆದು, ಕಬ್ಬಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಾ. ಕೆ.ಆರ್. ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಚನ್ನರಾಯಪಟ್ಟಣ ತಾಲೋಕಿನ ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ಹರೀಶ್ ರವರು JDS ತೊರೆದು, ಕಬ್ಬಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಾ. ಕೆ.ಆರ್. ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷದ ಹಿಂದೆ JDS ನವರು ನೀಡಿದ ಕೆಲವಂದು ಆಶ್ವಾಸನೆ ಮೇರೆಗೆ ಅವರನ್ನು ನಂಬಿ JDS ಸೇರ್ಪಡೆಯಾಗಿದ್ದೆ, ಅವರ ಬರಿ ಪೊಳ್ಳು ಆಶ್ವಾಸನೆ ನೀಡಿದ್ದು, ಮನಸ್ಸಿಗೆ ಬೇಸರವಾಯಿತು. ಅಲ್ಲದೆ ರಾಜ್ಯ ಮಟ್ಟದಲ್ಲೂ JDS ಗೆ ಭವಿಷ್ಯವಿಲ್ಲ ಆದುದರಿಂದ JDS ತೊರೆದು, ನಮ್ಮ ಪಂಚಾಯಿತಿಯ ಉಪಾಧ್ಯಕ್ಷರು, ಅಭಿವೃದ್ಧಿ ಹರಿಕಾರರು ಉತ್ತಮ ಸಂಘಟಕರು ಅದ ಮಾನ್ಯ ಡಾ. ಕೆ. ಆರ್. ಸುರೇಶ್ ರವರನ್ನು ಬೆಂಬಲಿಸಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು. -->>ವರದಿ ದೊಡ್ಡಹಾರನಹಳ್ಳಿ ಮಲ್ಲೇಶ್