ಕಾವುದವಾಡಿ - ಇಂದು ಸಂತೇಮರಹಳ್ಳಿಯಲ್ಲಿ ರಸ್ತೆ ದುರಸ್ಥಿಗಾಗಿ ಕನಾ೯ಟಕ ರಾಜ್ಯ ಉಪ್ಪಾರ ಎಸ್.ಟಿ.ಹೋರಾಟ ಸಮಿತಿ & ಪ್ರಗತಿಪರ ಸಂಘಟನೆಗಳಿಂದ ಹಾಗೂ ರೈತ ಸಂಘಟನೆಗಳಿಂದ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರಿಂದ ಕಾವುದವಾಡಿ ಬಸ್ಸು ನಿಲ್ದಾಣದಿಂದ ಸಂತೇಮರಹಳ್ಳಿ ಡಾII ಶಿವಕುಮಾರಸ್ವಾಮಿಯವರ ವೃತ್ತದವರಗೆ ಪಾದಯಾತ್ರೆಯ ಮೂಲಕ ಗುಂಡಿ ಬಿದ್ದ ಹದಗೆಟ್ಟ ರಸ್ತೆ ವ್ಯವಸ್ಥೆ ಖಂಡಿಸಿ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಮಾರ್ಗದ ನರಸೀಪುರ ರಸ್ತೆ ಮಾರ್ಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಸ್ತೆ ದುರಸ್ಥಿಗೆ ಆಗ್ರಹಸಿ ಪಾದಯಾತ್ರೆ ನಡೆಸಿದರು. ರಸ್ತೆ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಒಂದು ಘಂಟೆಗಳ ಕಾಲ ರಸ್ತೆ ತಡೆದು ಪಾದಯಾತ್ರೆ ಕೈಗೊಂಡರು. ನಂತರ ಮಾತನಾಡಿದ ಹೊನ್ನುರು ಪ್ರಕಾಶ್ ರವರು
ಕಳೆದ ಎರಡು ವರ್ಷದಲ್ಲಿ ನಿರ್ಮಿಸಿದ್ದ ರಸ್ತೆ ಹಳ್ಳಗೊಳ್ಳಗಳಾಗಿ ಗುಂಡಿ ಬಿದ್ದಿದೆ .ಅಲ್ಲದೆ ಹಣ ಹೊಡೆಯುವ ಹುನ್ನಾರ ನಡೆಸಿರುವ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯನ್ನು ತಪ್ಪಿಸಿ ಕಳಪೆ ಕಾಮಗಾರಿ ಮಾಡಿರುವ ಕಾರಣ ರಸ್ತೆ ಹಾಳಾಗಿದೆ. ಕೂಡಲೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಬೇಕು ಮತ್ತು ಹೊಸ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದರು. ನಂತರ ಮಾತನಾಡಿದ ಕನಾ೯ಟಕ ರಾಜ್ಯ ಉಪ್ಪಾರ ಎಸ್.ಟಿ.ಹೋರಾಟ ಸಮಿತಿಯ ರಾಜ್ಯಧ್ಯಕ್ಷರಾದ ಬಾಗಳಿ ರೇವಣ್ಣ ಮಾತನಾಡಿ ದಿನಾ ನಿತ್ಯಾ ಸಾವಿರಾರು ಜನರು ಇದೇ ಮಾಗ೯ವಾಗಿ ಶಾಲೆಯ ಮಕ್ಕಳು ಹಾಗೂ ವಾಹನಗಳು ಚಲಿಸುತ್ತಿದ್ದು ದೊಡ್ಡ-ದೊಡ್ಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ತಿರುಗಾಡಲು ಬಹಳ ತೊಂದರೆಯಾಗಿದೆ.ಹಾಗೂ ಮಳೆಗಾಲದಲ್ಲಿ ಗುಂಡಿಗಳೇ ಕಾಣುವುದಿಲ್ಲ ಹಾಗೂ ದಿನಾ- ನಿತ್ಯಾ ಯಾವುದಾದರೂ ಅಫಾಗತಗಳು ಸಂಭವಿಸುತ್ತೆವೆ. ಆದ್ದರಿಂದ ರಸ್ತೆಯನ್ನು ಸರಿಪಡಿಸದಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದ್ದಾಗಿ ಹೇಳಿದ್ದರು.ಇದೇ ಸಂದಭ೯ದಲ್ಲಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಅಧೀಕ್ಷಕ ಇಂಜಿನಿಯರ್ ರಾದ ವೀರಭದ್ರಯ್ಯ ರವರು ಮಾತನಾಡಿ ಇನ್ನೂ ವಾರದವಳಗೆ ಗುಂಡಿಗಳನ್ನು ಮುಚ್ಚಿಸುವುದಾಗಿ ಹಾಗೂ ನಂತರ ಸಂಬಂಧಪಟ್ಟವರ ಜೊತೆ ಮಾತನಾಡಿ ಸಮಸ್ಯೆಯನ್ನು ಬಗ್ಗೆ ಹರಿಸುವುದಾಗಿ ಇನ್ನು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ರೆನೆ. ಎಂದು ಹೇಳಿದ್ದರು.ಇದೇ ಸಂದಭ೯ದಲ್ಲಿ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಅಧ್ಯಕ್ಷ ಬಾಗಳಿ ರೇವಣ್ಣ .ರೈತ ಮುಖಂಡರಾದ ಹೊನ್ನುರು ಬಸವಣ್ಣ ಗ್ರಾಮಪಂಚಾಯ್ತಿ ಸದಸ್ಯ ಎಂ.ಪಿ.ಶಂಕರ್ , ಯುವ ಮುಖಂಡರಾದ ಕಾವುದವಾಡಿ ಟಿ.ಲೋಕೇಶ್. ಸಂತೇಮರಹಳ್ಳಿ ಗುರುರಾಜ್. ಸಂತೇಮರಹಳ್ಳಿ ಲೋಕೇಶ್ .ಕಾವುದವಾಡಿ ಮುಖಂಡರಾದ ಕೆ.ಎಂ.ಚಿನ್ನಸ್ವಾಮಿ' ಶ್ರೀಕಂಠಮೂತಿ೯.ಬಾಣಹಳ್ಳಿ ಕುಮಾರ ದೇಮಹಳ್ಳಿ ಶಿವಮಲ್ಲಪ್ಪ ಬಸವಟ್ಟಿ ನಾಗಣ್ಣ ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು
----ವರದಿ- ಟಿ.ಲೋಕೇಶ್

