ಹನೂರು ಸಮೀಪದ ಆರ್.ಎಸ್.ದೊಡ್ಡಿ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನೂರು ಶೈಕ್ಷಣಿಕ ವಲಯ ಶೈಕ್ಷಣಿಕವಾಗಿ ರಾಜ್ಯ ಹಾಗೂ ಜಿಲ್ಲೆ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ ಇದಕ್ಕೆ ಶಿಕ್ಷಕ ವೃಂದದವರೆ ಮುಖ್ಯ ಕಾರಣರಾಗಿದ್ದಾರೆ. ವಿಧ್ಯಾಥಿಗಳಿಗೆ ಪಠ್ಯೆ ಬೋಧನೆ ಮಾಡುವುದರ ಜೊತೆಗೆ ಪೋಷಕರನ್ನು ಹಿರಿಯರನ್ನು ಶಿಕ್ಷಕರನ್ನು ಗೌರವಿಸುವ ಬಗ್ಗೆ ಅರಿವು ಮೂಡಿಸಬೇಕು ಅವರ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತಾಗಬೇಕು ಎಂದರಲ್ಲದೆ ಹನೂರು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು ಆರ್ಥಿಕವಾಗಿ ಹಿಂದುಳಿದಿದ್ದರೂ ಶೈಕ್ಷಣಿಕವಾಗಿ ಮುಂದುವರೆದಿದೆ. ಸದೃಢ ಸಮಾಜ ಹಾಗೂ ದೇಶದ ನಿರ್ಮಾತೃರು ಶಿಕ್ಷಕರು ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಇಂದಿನ ಕಾಲದಲ್ಲಿ ತಿಳಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶ್ರಿಕಂಠೇಗೌಡ ಅವರು ಸರ್ವಪಲ್ಲಿ ರಾಧಕೃಷ್ಣನ್ ರವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು ಶಿಕ್ಷಕರ ಹಕ್ಕೊತ್ತಾಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಡಿಡಿಪಿಐ ಮಂಜುನಾಥ್ ಮಾತನಾಡಿ ಶಿಕ್ಷಕರ ಕರ್ತವ್ಯ ನಿಷ್ಠೆ ಅವಿರತ ಶ್ರಮದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ೮ ಶಾಲೆಗಳು ೧೦೦ ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದ ಗರಿಯನ್ನು ಮುಡಿಗೇರಿಸಿದೆ. ಶಿಕ್ಷಣದ ಜೊತೆಗೆ ಕ್ರಿಡಾ ಮತ್ತು ಸಾಂಸ್ಕೃತಿಕವಾಗಿಯು ಸಹ ಹನೂರು ಶೈಕ್ಷಣಿಕ ವಲಯ ಉತ್ತಮ ಸಾಧನೆ ಮಾಡಿದೆ ಇದಕ್ಕೆ ಶಿಕ್ಷಕರು ಹಾಕಿರುವ ಶ್ರಮ ಮೆಚ್ಚುವಂತದ್ದು, ಅದಲ್ಲದೆ ಗುಡ್ಡಗಾಡು ಕಾಂಡಂಚಿನಲ್ಲಿರುವ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹಲವರಿಗೆ ಸನ್ಮಾನ: : ಹನೂರು ಶೈಕ್ಷಣಿಕ ವಲಯದಲ್ಲಿ ಶೇಖಡ ೧೦೦% ಫಲಿತಾಂಶ ಪಡೆದ ಶಾಲೆಯ ಮುಖ್ಯಶಿಕ್ಷಕರಿಗೆ ಸನ್ಮಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ನಲಿ-ಕಲಿ ಮೂರು ಶಾಲಾ ಶಿಕ್ಷಕರಿಗೆ ಸನ್ಮಾನ ಮತ್ತು ಕ್ರಿÃಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಜಿಪಂ. ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಸವರಾಜು, ಮರುಗದ ಮಣಿ, ಲೇಖಾ, ತಾ.ಪಂ ಅಧ್ಯಕ್ಷ ರಾಜೇಂದ್ರ,ಸದಸ್ಯ ಜವಾದ್ ಅಹಮ್ಮದ್,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ರಾ.ನೌ.ಸಂ ಹನೂರು ಘಟಕ ಅಧ್ಯಕ್ಷ ಗುರುಸ್ವಾಮಿ, ಜಾನ್ ಬ್ರಿಟ್ರೊ ನಾಗರಾಜು, ಸಿದ್ದಪ್ಪ ಸೇರಿದಂತೆ ಪ.ಪಂ ಸದಸ್ಯರಾದ ಗಿರೀಶ್ ಆನಂದ್,ನಾಗರಾಜು ಮುಮ್ತಾಜ್ ಭಾನು ಸೇರಿ ಬಿಆರ್‌ಪಿ ಮತ್ತು ಸಿಆರ್‌ಪಿ, ವಿವಿಧ ಶಿಕ್ಷಕರ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು, ಶಿಕ್ಷಕ ವರ್ಗದವರು ಇದ್ದರು.
ಸುದ್ದಿ ೧ ಪೋಟೋ೧
ಹನೂರು ಸಮೀಪದ ಆರ್.ಎಸ್.ದೊಡ್ಡಿ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ನರೇಂದ್ರ ಉದ್ಘಾಟನೆ ಮಾಡಿದರು.
ಸುದ್ದಿ ೧ ಪೋಟೋ೨
ಹನೂರು ಸಮೀಪದ ಆರ್.ಎಸ್.ದೊಡ್ಡಿ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಿದರು.
ಸುದ್ದಿ ೧ ಪೋಟೋ೩
ಹನೂರು ಸಮೀಪದ ಆರ್.ಎಸ್.ದೊಡ್ಡಿ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದರು.


