Ticker

6/recent/ticker-posts

ಹನೂರು : ಸಹಕಾರ ಸಂಘ ಅಭಿವೃದ್ದಿ ಹೊಂದಲು ಸದಸ್ಯ ರೈತರುಗಳ ಸಹಕಾರ ಮತ್ತು ಬೆಂಬಲ ಅಗತ್ಯ ಅವಶ್ಯಕತೆ ಇದೆ ಎಂದು ರಾಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಗಜೇಂದ್ರ ಹೇಳಿದರು.

 ಹನೂರು ತಾಲ್ಲೂಕಿನ ರಾಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಉದ್ದೇಶಿಸಿ ಮಾತನ್ನಾಡುತ್ತಾ, 2018-19 ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ 105 ಸದಸ್ಯರಿಗೆ 61,87,000 ರೂ ಸಾಲ ಮನ್ನಾ ಆಗಿದೆ. ಇನ್ನೂ  ಸರ್ಕಾರದಿಂದ 19,80,000 ರೂ ಹಣ ಬರಬೇಕಾಗಿದೆ. ಕಳೆದ ಸಾಲಿನಲ್ಲಿ 22,942 ರೂ ನಿವ್ವಳ ಲಾಭವನ್ನು ಸಂಘ ಮಾಡಿದೆ ಎಂದು ಮಾಹಿತಿ ನೀಡಿದರು. ಮುಂದಿನ 2 ಅಥವಾ 3 ತಿಂಗಳಲ್ಲಿ ಸುಮಾರು 100 ರೈತ ಸದಸ್ಯರುಗಳಿಗೆ ಸಾಲ ನೀಡಲಾಗುವುದು ಎಂದು ತಿಳಿಸಿದರು. 
ಲಾಭದಲ್ಲಿ ನಡೆಯುತ್ತಿರುವ ಶುದ್ದ ಕುಡಿಯುವ ನೀರಿನ ಘಟಕ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶುದ್ದ ಕುಡಿಯುವ ನೀರಿನ ಘಟಕ ನಡೆಸಲಾಗುತ್ತಿದ್ದು 98,799 ರೂ ಲಾಭ ಲಭಿಸಿದ್ದು, ಮುಂದಿನ ದಿನಗಳಲ್ಲಿ ಸಹಕಾರ ಸಂಘದ ವತಿಯಿಂದ ಜನರಿಗೆ ಉತ್ತಮ ಸೇವೆ ನೀಡುತ್ತೇವೆ ಎಂದು ಹೇಳಿದರು.
ಎಂ.ಸಿ.ಡಿ.ಸಿ ವ್ಯವಸ್ಥಾಪಕ ಸೋಮಣ್ಣ ಮಾತನ್ನಾಡುತ್ತಾ, ರಾಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ಉತ್ತಮ ವಾಗಿ ನಡೆಯುತ್ತಿದೆ ಹಾಗು ಶುದ್ದ ಕುಡಿಯುವ ನೀರಿನ ಘಟಕ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದು ಇತರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ  ಪ್ರಾಥಮಿಕ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಭಾಕರ್, ಉಪಾದ್ಯಕ್ಷ ಮುತ್ತುರಾಮು, ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಿ, ನಿರ್ದೇಶಕಿ  ಜ್ಯೋತಿ, ಮುಖಂಡರುಗಳಾದ ಪ್ರಭುಸ್ವಾಮಿ, ತ್ಯಾಗರಾಜು ಹಾಗು ರೈತ ಸದಸ್ಯರುಗಳು ಭಾಗವಹಿಸಿದ್ದರು.