ತಮಿಳುನಾಡು ಮೂಲದ ಓರ್ವ ಬಾಲಕ ಸೇರಿದಂತೆ ಬಾಲರಾಜು,ಸೇಲ್ವರಾಜು,ಪೆರಿಯಾಸವರಿ,ಆರೋಗ್ಯಮೇರಿ, ವಿನೋದ್,ಸೂಸೈಯಿಮೇರಿ, ಇರುದಯರಾಜ್, ಬಂಧಿತ ಆರೋಪಿಗಳಾಗಿದ್ದಾರೆ
ಘಟನೆ ವಿವರ : ಕೌದಳ್ಳಿ ವನ್ಯಜೀವಿ ವಲಯದ ಬೆಜ್ಜಲನಾಣೆ ಬಿಟ್ ಬಿಳಿಗುಂಡ್ಲು, ಬಳಿ ತಮಿಳುನಾಡು ಮೂಲದ ತಂಡವೂಂದು ಬೀಡು ಬಟ್ಟು ಉರುಳು ಹಾಕಿ ಪ್ರಾಣಿಗಳನ್ನು ಬೇಟಿ ಮಾಡುವುದು ಹಾಗೂ ಮಾಕಳಿ ಬೇರು ಸಂಗ್ರಹಿಸಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಅರಣ್ಯಾಧಿಕಾರಿಗಳು ಧಾಳಿ ನೆಡೆಸಿದ್ದಾರೆ. ಈ ವೇಳೆ 40ಕೆಜಿಯಷ್ಟು ಮಾಕಳಿ ಬೇರು ಹಾಗೂ 12 ಉರುಳು ಅದನ್ನು ತಗೆಯಲು ಬಳಸುತ್ತಿದ್ದ ಆಯುದಗಳನ್ನು ವಶಪಡಿಸಿಕೂಂಡಿದ್ದಾರೆ.
ಕಾವೇರಿ ವನ್ಯಧಾಮದ ಉಪರಣ್ಯಾಧಿಕಾರಿ ರಮೇಶ್ ರವರ ಮಾರ್ಗದರ್ಶಣದಲ್ಲಿ ಧಾಳಿ ನೆಡೆಸಿದ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು,ವಲಯ ಅರಣ್ಯಾಸಂರಕ್ಷಣಾಧಿಕಾರಿ ವಿನಯ್‍ಕುಮಾರ್,ನಿಶ್ಚಿತ್,ಸೇರಿದಂತೆ ಹಲವರು ಹಾಜರಿದ್ದರು
ಪೋಟೊ ಇದೆ

