ಚಲನಚಿತ್ರ ಮೇರು ನಟ ಡಾ ವಿಷ್ಣುವರ್ಧನ್ ಯುವ ಜನಾಂಗಕ್ಕೆ ಮಾದರಿ ಆಗುವಂತಹ ವಿಚಾರ ಎಂದು ಸ್ಯಾಂಡ್ ಹುಡ್ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಜಯಸಿಂಹ ತಿಳಿಸಿದ್ದಾರೆ
ಪಟ್ಟಣದ ಮಹಾತ್ಮಗಾಂಧಿ ಕಾಲೇಜು ಮುಂಭಾಗ ಏರ್ಪಡಿಸಿದ್ದ ವಿಷ್ಣುವರ್ಧನ್ ಅವರ 69ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲೇ ಡಾ॥ ವಿಷ್ಣುವರ್ಧನ್ ಹೃದಯವಂತ ಅವರು ಬಡವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ವೈದ್ಯಕೀಯ ಸಹಾಯ ಮಾಡುತ್ತಿದ್ದರು ಹಾಗೂ ಅನಾಥ ಮಕ್ಕಳಿಗೆ ಮತ್ತು ವೃದ್ಧರಿಗೆ ಸಹಾಯ ಹಸ್ತ ತೋರುತಾ ಮಹಾ ಮೇಧಾವಿ ಯಾದರು ಎಂದು ಅವರ ಹಲವಾರು ವಿಚಾರಧಾರೆಗಳನ್ನು ಇಲ್ಲಿ ಕೊಂಡಾಡಲಾಯಿತು
ವಿಷ್ಣುವರ್ಧನ್ ಅವರ ಭಾವಚಿತ್ರವನ್ನು ಸಾರ್ವಜನಿಕವಾಗಿ ಇಟ್ಟು ಪೂಜೆ ಸಲ್ಲಿಸಿ ಅಭಿನಂದನೆ ಸೂಚಿಸಿದರು
ನೆರೆದಿದ್ದ ನೂರಾರು ಜನಕ್ಕೆ ಅನ್ನದಾನ ವಿತರಣೆ ಮಾಡಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಾದ ನಾರಾಯಣಸ್ವಾಮಿ ಶಿವು ಮನೋಜ್ ರಂಗನಾಥ್ ಜಗದೀಶ್ ನಾಗೇಶ್ ಇದ್ದರು.


