Ticker

6/recent/ticker-posts

ಹಾಸನ: ಮಾನವೀಯತೆ ಮೆರೆಯುತ್ತಿರುವ ಕ್ರೆಸ್ಟ್ ಶಾಲೆ

ಮಾನವೀಯತೆ ಮೆರೆಯುತ್ತಿರುವ ಕ್ರೆಸ್ಟ್ ಶಾಲೆ

ಹಾಸನ:  ವಿದ್ಯಾರ್ಥಿಗಳಿಗೆ ‌ಮಾನವೀಯ‌ ಹಾಗೂ‌ ನೈತಿಕ ಶಿಕ್ಷಣ ‌ ನೀಡಲು ಕ್ರೈಸ್ಟ್ ವಿದ್ಯಾಸಂಸ್ಥೆ ಮುಂದಾಗಿದೆ.

 ಇದಕ್ಕಾಗಿಯೇ  ಶಾಲೆಯಲ್ಲಿ‌ ಜೀವಸ್ಪರ್ಶಿ ಘಟಕ ತೆರೆಯಲಾಗಿದ್ದು ‌‌ಈ‌ ಮೂಲಕ ಮಕ್ಕಳಿಗೆ ಮಾನವೀಯ ಶಿಕ್ಷಣ ‌ಹೇಳಿಕೊಡಲು‌ ಶಿಕ್ಷಕರು ಪಣತೊಟ್ಟಿದ್ದಾರೆ. ಜೀವಸ್ಪರ್ಶಿ ಹೆಸರಿನಂತೆ ನೊಂದವರಿಗೆ, ಅನಾಥಮಕ್ಕಳಿ, ವೃದ್ದರಿಗೆ,ರೋಗಿಗಳಿಗೆ  ಊಟ ಉಪಚಾರ ನೀಡುವ  ಮೂಲಕ ಇತರೆ‌  ಶಾಲೆಗಳಿಗೆ ‌ಮಾದರಿಯಾಗಿದ್ದಾರೆ. 

 ಪ್ರಾಂಶುಪಾಲ ರೆ.ಫಾ ಫ್ರೈಸನ್ ಮಾರ್ಗದರ್ಶನದಲ್ಲಿ  ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ  ಚನ್ನರಾಯಪಟ್ಟಣ‌ ತಾಲ್ಲೂಕಿನಲ್ಲಿರುವ ಮಾತೃಭೂಮಿ ವೃದ್ದಾಶ್ರಕ್ಕೆ    ತೆರಳಿ
ಶಾಲೆಯ ಶಿಕ್ಷಕರು ‌ಹಾಗೂ‌ಶಿಕ್ಷಕಿಯರೇ ತಯಾರಿಸಿದ‌ ಊಟವನ್ನು ವೃದ್ದರಿಗೆ  ನೀಡುವ‌ ಮೂಲಕ ಮಾನವೀಯತೆ ಮೆರೆದಿದ್ದಾರೆ.