Ticker

6/recent/ticker-posts

ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ವೀರಶೈವ ಸಮಾಜ ಬಸವ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಶ್ರೀ ವಿನಾಯಕ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು......



ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ವೀರಶೈವ ಸಮಾಜ ಬಸವ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಶ್ರೀ ವಿನಾಯಕ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಗಣಪನಿಗೆ ವಿಶೇಷ ಪೂಜೆ ಪುರಸ್ಕಾರಗಳನ್ನು ಸಲ್ಲಿಸಿ ಸುಗಂಧ ಪುಷ್ಪಗಳಿಂದ ಸುಂದರ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗಿತ್ತು ಅರ್ಚಕರ ಸಮ್ಮುಖದಲ್ಲಿ ವಿನಾಯಕನಿಗೆ ವೇದ ಮಂತ್ರಗಳನ್ನು ಜಪಿಸಿ ಮಹಾ ಮಂಗಳಾರತಿಯನ್ನು ಮಾಡಿದರು ಗ್ರಾಮದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನವನ್ನು ಮಾಡಿ ಕಣ್ಣು ತುಂಬಿಕೊಂಡು ಪಾವನರಾದರು ನೆರವೇರಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ನೀಡಿದರು ನಂತರ ಗಣಪತಿ ವಿಗ್ರಹವನ್ನು ಭವ್ಯ ಮಂಟಪದಲ್ಲಿ ಕುರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಹಾಗೂ ವೀರಗಾಸೆ ಕುಣಿತ ಒಂದಿಗೆ ಸಾಗಿತ್ತು ಗ್ರಾಮದ ಜನರು ಗಣಪನಿಗೆ ಹಣ್ಣು-ಕಾಯಿಗಳನ್ನು ಹೂ ನೀಡುವ ಮೂಲಕ ಪೂಜೆಗಳನ್ನು ಸಲ್ಲಿಸಿದರು ಮಕ್ಕಳು ಕುಣಿದು ಕುಪ್ಪಳಿಸಿದರು ನಂತರ ಗಣಪನ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು



     -----ಡಿ . ಆರ್ . ಜಗದೀಶ್  (ದೇವಲಾಪುರ )