ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರು, ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಹಾಗು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಈಶ್ವರಪ್ಪ ನವರು ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಂದು ವಿಧಾನಸೌದದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ಭಾಗದಲ್ಲಿ ತಲೆದೋರಿರುವ ನೆಟ್ ವರ್ಕ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು
* ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದ್ದು ಖಾಸಗಿ ಕಂಪನಿಗಳ ಜೊತೆಗೂಡಿ ಹೆಚ್ಚಿನ ಟವರ್ ಗಳನ್ನು ಮಲೆನಾಡು ಭಾಗದಲ್ಲಿನ ನಿರ್ಮಾಣ ಮಾಡಬೇಕು.
* ಮಲೆನಾಡು ಭಾಗದಲ್ಲಿ ಹೆಚ್ಚಿನ ಭಾಗದಲ್ಲಿ ಬಿಎಸ್ ಎನ್ ಎಲ್ ಇದ್ದು ಖಾಸಗಿ ಕಂಪನಿಗಳು ಜೊತೆಗೂಡಬೇಕು ಇದರಿಂದ ಬೆಂಗಳೂರಿನಿಂದ ರಜೆ ಸಂದರ್ಭದಲ್ಲಿ ಬರುವ ಯುವಕರಿಗೆ ಸಹಾಯವಾಗಲಿದೆ ಅಂತ ಹೇಳಿದರು
* ಈ ಸಂದರ್ಭದಲ್ಲಿ ಹಾಜರಿದ್ದ ಖಾಸಗಿ ಟೆಲಿಕಾಮ್ ಕಂಪನಿಗಳಿಗೆ ಮಲೆನಾಡು ಭಾಗದಲ್ಲಿ ಯಾವುದೇ ರೀತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ತಲೆದೂರುದಂತೆ ಟವರ್ ಗಳನ್ನು ಅಳವಡಿಸಬೇಕು ಹಾಗು ಇದಕ್ಕೆ ಬೇಕಾದ ನೆರವನ್ನು ನೀಡಲು ಸಿದ್ದ ಅಂತ ಕಂಪನಿಗಳಿಗೆ ಭರವಸೆ ನೀಡಲಾಯಿತು
* ಇನ್ನು ತುಮಕೂರು ಶಿವಮೊಗ್ಗ ಹೈವೇ ಯೋಜನೆ ಗೆ ತೊಡಕಾಗಿರೋ ತುಮಕೂರು ಪಟ್ಟಣದ ಭೂ ಸ್ವಾದೀನ ಪ್ರಕ್ರಿಯೆಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಯಿತು .
* ಹೈವೆಯಲ್ಲಿ ಹಾದು ಹೋಗುವ ಜಾಗದಲ್ಲಿರೋ ಕರೆಗಳನ್ನು ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣ ಕ್ಕೆ ಬಳಸಿಕೊಳ್ಳಲು ತೀರ್ಮಾನ ಮಾಡಲಾಯಿತು.
* ಹೈವೇ ನಿರ್ಮಾಣ ಕಾಮಗಾರಿಗಳುನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
* ಇನ್ನು ಸಿಗಂಧೂರು ಸೇತುವೆ ನಿರ್ಮಣ ಒಟ್ಟು ಉದ್ದ 2.4 ಕಿಲೋಮೀಟರ್ ಇದ್ದು ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು.
* ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಆದಷ್ಟು ಬೇಗ ಕೆಲಸ ಆರಂಭ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು.
* ಇನ್ನು ಶಿವಮೊಗ್ಗ ಸುತ್ತ ಉದ್ದೇಶಿಸಲಾಗಿರೋ 2 ಲೈನ್ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ಇದ್ದ ರೈಲ್ವೇ ಭೂಸ್ವಾದೀನಕ್ಕೆ ಇದ್ದ ಸಮಸ್ಯೆ ಬಗೆಹರಿಸಲಾಯಿತು.
* ಆದಷ್ಟು ಬೇಗ ರಿಂಗ್ ರಸ್ತೆ ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು

