Ticker

6/recent/ticker-posts

ಕೆ.ಆರ್.ಪೇಟೆ: ತನ್ನ ಮಗಳು ಫೇಸ್ ಬುಕ್ ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಮಗು ಬಿಟ್ಟು ಪರಾರಿಯಾದ ಹಿನ್ನೆಲೆಯಲ್ಲಿ ಮಾನ ಮಾರ್ಯಾದೆಗೆ ಅಂಜಿದ ಮಹಿಳೆಯೊಬ್ಬರು ತನ್ನ ಮೊಮ್ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಮೊಮ್ಮಗ ಮೃತಪಟ್ಟಿದ್ದಾನೆ.

ಕೆ.ಆರ್.ಪೇಟೆ ಬಿಗ್ ಬ್ರೇಕಿಂಗ್:
    ತನ್ನ ಮಗಳು ಫೇಸ್ ಬುಕ್ ನಲ್ಲಿ  ಪರಿಚಯವಾದ ಪ್ರಿಯಕರನೊಂದಿಗೆ ಮಗು ಬಿಟ್ಟು ಪರಾರಿಯಾದ ಹಿನ್ನೆಲೆಯಲ್ಲಿ ಮಾನ ಮಾರ್ಯಾದೆಗೆ ಅಂಜಿದ ಮಹಿಳೆಯೊಬ್ಬರು ತನ್ನ ಮೊಮ್ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಮೊಮ್ಮಗ  ಮೃತಪಟ್ಟಿದ್ದಾನೆ. ಮಹಿಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧುಘಟ್ಟದಲ್ಲಿ ಸೋಮವಾರ ಸಂಜೆ  ನಡೆದಿದೆ.

ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ 
 ಮಾರುತಿ ನಗರ ಬಡಾವಣೆಯ ಲಕ್ಷ್ಮೀ ಅವರ ಪುತ್ರ ಪ್ರಜ್ವಲ್( 11ವರ್ಷ ) ಮೃತ ಬಾಲಕ ಎಂದು ಗುರುತಿಸಲಾಗಿದೆ. 

ಮೊಮ್ಮಗನೊಂದಿಗೆ ಕೆರೆಗೆ ಹಾರಿದ ಅಜ್ಜಿ   ಸಾವಿತ್ರಮ್ಮ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಆದರೆ ಪೊಲೀಸರು ಮೊಮ್ಮಗನನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪದ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.

ಸಾವಿತ್ರಮ್ಮ ಅವರ  ಮಗಳು ಲಕ್ಷ್ಮಿ ಎಂಬಾಕೆ  ಇತ್ತೀಚೆಗೆ ಫೇಸ್ ಬುಕ್  ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ಮಾನಕ್ಕೆ ಅಂಜಿ ಮೊಮ್ಮಗನನ್ನು ಸಾಯಿಸಿ ತಾನು ಸಾಯಲು ನಿರ್ಧರಿಸಿ ಶಾಲೆಗೆ ಹೋಗಿದ್ದ ಮೊಮ್ಮಗ ಪ್ರಜ್ವಲ್ ನನ್ನು ಕರೆತಂದು ಸಿಂಧುಘಟ್ಟದ ಕೆರೆಗೆ  ತಳ್ಳಿ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಸಿಂಧುಘಟ್ಟ  ಕೆರೆಯಲ್ಲಿ ಮುಳುಗಿದ ಬಾಲಕನ ಮೃತ ದೇಹಕ್ಕಾಗಿ  ಕೆರೆಯಲ್ಲಿ  ಶೋಧನೆ ಮಾಡಲಾಗುತ್ತಿದೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು  ಪ್ರಕರಣ ದಾಖಲಾಗಿದೆ.