ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಂಡ್ಯ ಜಿಲ್ಲಾ ಅಧ್ಯಕ್ಷ ರಾದ ಲಯನ್ ವಿಷ್ಣು ವಿಠಲ್ ರವರ ನೇತೃತ್ವದಲ್ಲಿ ಡಾ.ವಿಷ್ಣುವರ್ಧನ್ ರವರ 69 ನೇ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಮಧುಮೇಹ ಮತ್ತು ಅಧಿಕ ರಕ್ತ ಒತ್ತಡ ಪರೀಕ್ಷೆ ಹಾಗೂ ದಂತ ತಪಾಸಣೆಯನ್ನು ಡಾ.ಅಗರ್ ವಾಲ್ ಐ ಹಾಸ್ವಿಟಲ್ ಡಾ.ಮೋಹನ್ ಡಯಾಬಿಟಿಸ್ ಸೆಂಟರ್ ಮೈಸೂರು ಹಾಗೂ ಸಂತೋಷ್ ಪಾಲಿಕ್ಲಿನಿಕ್ ಪಾಂಡವಪುರ ಇವರ ಸಂಯುಕ್ತ ಆಶ್ರಯದಲ್ಲಿ ಹೀರಿಮರಳಿ ಗ್ರಾಮದ ಆಟೋ ಸರ್ಕಲ್ ನಲ್ಲಿ ಆಯೋಜಿಸಲಾಗಿತ್ತು ನೂರಾರು ರೋಗಿಗಳು ಈ ಶಿಬಿರದ ಸದುಪಯೋಗ ಪಡೆದು ಕೊಂಡರು.... ಈ ಸಂಧರ್ಭದಲ್ಲಿ ಮಾತನಾಡಿದ ಲಯನ್ ವಿಷ್ಣು ವಿಠಲ್ ರವರು ವಿಷ್ಣು ಸರಳತೆ ಪ್ರಾಮಾಣಿಕತೆ ಗುಣ ನಮಗೆಲ್ಲರಿಗೂ ಮಾದರಿ ಹಾಗೂ ಅವರು ನಮ್ಮನಗಲಿ ಹತ್ತು ವರ್ಷಗಳು ಕಳೆದರೂ ಸಹ ಇಡೀ ಕರ್ನಾಟಕದಲ್ಲಿ ಅವರ ಹೆಸರು ಅಜಾರಾಮರವಾಗಿ ಉಳಿದಿದೆ ಇದಕ್ಕೆ ಕಾರಣ ಅವರು ಸಂಪಾದಿಸಿರುವ ಅಭಿಮಾನಿಗಳು.. ಸೂರ್ಯ ಚಂದ್ರ ಇರುವವರೆಗೂ ಅವರ ಹೆಸರು ಸದಾಕಾಲವೂ ಜೀವಂತ.... ಈ ಸಂಧರ್ಭದಲ್ಲಿ ವಿಷ್ಣು ಅಭಿಮಾನಿ ಸಂಘದ ಅಜಯ್, ಶಿವಕುಮಾರ್ ,ಭರತ್ ಕಿಚ್ಚ , ಆಟೋ ಕಾಳಪ್ಪ ,ಯೋಗೆಶ್ , ಚಂದ್ರು.ರವಿ, ಸುನೀಲ್ ಹಾಗೂ ಈ ತಪಾಸಣೆಗೆ ಮುಖ್ಯ ಅತಿಥಿಗಳಾಗಿ ಇನ್ಸ್‌ಪೆಕ್ಟರ್ ಸುಮಾರಾಣಿ ಹಾಗೂ ಬಿಜೆಪಿ ಮುಖಂಡ ರಾದ ಹೆಚ್ .ಎನ್.ಮಂಜುನಾಥ್ .ಡಾ. ಸಂತೋಷ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರಾದ ರಮೇಶ್ ,ಹಾಗೂ ಹೀರಿಮರಳಿ ಗ್ರಾಮದ ಆಟೋ ಚಾಲಕರು.ಉಪಸ್ಥಿತಿ ಯಲ್ಲಿ ದ್ದರು....

