Ticker

6/recent/ticker-posts

ಹನೂರು: ಭಾರೀ ಮಳೆಗೆ ಗುಡ್ಢದಿಂದ ಬೃಹತ್ ಆಕಾರದ ಬಂಡೆಹೂಂದು ರಸ್ತೆಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ಮಂಗಳವಾರ ಬೆಳಂಬೆಳ್ಳಿಗೆ ನೆಡೆದಿದೆ.





              ಹನೂರು ತಾಲ್ಲೂಕಿನಿಂದ ನೆರೆಯ ರಾಜ್ಯವಾದ  ತಮಿಳುನಾಡಿಗೆ ಸಂಪರ್ಕ  ಕಲ್ಪಿಸುವ   ಮಲೈಮಹದೇಶ್ವರಬೆಟ್ಟ ಹಾಗೂ ಪಾಲಾರ್ ನಡುವಿನ  ಮಾರ್ಗಮಧ್ಯದಲ್ಲಿ  ಬಾರೀ ಗಾತ್ರದ ಬಂಡೆವೂಂದು ರಸ್ತೆಗೆ ಉರಳಿ  ಮದ್ಯೆ ಬಾಗದಲ್ಲಿಯೇ ಬಿದ್ದಿದೆ.ಇದರ ಪರಿಣಾಮ
ಈ ಭಾಗದಲ್ಲಿ ವಾಹನಗಳು ಮುಕ್ತವಾಗಿ ಸಂಚಾರ ಮಾಡಲು ತುಂಬಾ ಅಡಚಣೆಯಾಗಿದೆ.                .ವಾಹನಗಳ‌ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು 
ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಠಾಣೆಯ ಪೋಲೀಸ್ ಸಿಬ್ಬಂಧಿಗಳ ಭೇಟಿ  ನೀಡಿದ್ದಾರೆ ಬಳಿಕ ಬಂಡೆ ತೆರವಿಗಾಗಿ ಲೋಕಪಯೋಗಿ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ ಹಾಗೂ ಈ ಅವಘಡದಿಂದ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ