ದಿನಾಂಕ : 23.09.2019ರಂದು ಮಧ್ಯಾಹ್ನ ೦5.೦೦ ಗಂಟೆಗೆ ಬಿಜಿಎಸ್ ಸಭಾ ಭವನದಲ್ಲಿ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಶ್ರೀ ಗುರು ಸಂಸ್ಮರಣೋತ್ಸವ ಮತ್ತು ರಾಜ್ಯಮಟ್ಟದ ೪೧ನೇ ಶ್ರೀ ಕಾಲಭೈರವರ ಜಾನಪದ ಕಲಾಮೇಳ ಉದ್ಘಾಟನಾ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ ಟಿ.ತಿಮ್ಮೇಗೌಡರುರವರು ಐಎಎಸ್(ನಿ.) ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್, ಸನ್ಮಾನ್ಯ ಶ್ರೀ ಎಲ್.ಆರ್.ಶಿವರಾಮೇಗೌಡರು,ಮಾಜಿ ಸಂಸದರು,ಮಂಡ್ಯ. ಸನ್ಮಾನ್ಯ ಪ್ರೋ.ಕೃಷ್ಣೇಗೌಡರು,ಖ್ಯಾತ್ಯ ವಾಗ್ಮಿಗಳು,ಮೈಸೂರು. ಸನ್ಮಾನ್ಯ ಶ್ರೀ ದಾಸೇಗೌಡರು,ಅಧ್ಯಕ್ಷರು,ತಾಲ್ಲೂಕು ಪಂಚಾಯಿತಿ,ನಾಗಮಂಗಲ. ಸನ್ಮಾನ್ಯ ಶ್ರೀಮತಿ ವಸಂತಮ್ಮರವರು, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಚುಂಚನಹಳ್ಳಿ. ಸನ್ಮಾನ್ಯ ಶ್ರೀ ಆದಿತ್ಯನಂದರಾಜುರವರು, ಮ್ಯಾನೇಜಿಂಗ್ ಟ್ರಸ್ಟಿ, ಜಾನಪದ ಪರಿಷತ್ತು, ಬೆಂಗಳೂರು. ಹಾಗೂ ಇನ್ನಿತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ನಾಡೋಜ ಡಾ.ಹೆಚ್.ಎಲ್.ನಾಗೇಗೌಡ ಪ್ರಶಸ್ತಿಯನ್ನು ಸನ್ಮಾನ್ಯ ಶ್ರೀಮತಿ ಕೆ.ದುರ್ಗಮ್ಮ ಡೊಳ್ಳು ಕುಣಿತ ಕಲಾವಿದರು,ಕೂಡ್ಲಿಗಿ ತಾಲ್ಲೂಕು ಬಳ್ಳಾರಿ ಜಿಲ್ಲೆ, ಸನ್ಮಾನ್ಯ ಶ್ರೀ ಟಿ.ಎಸ್.ರವೀಂದ್ರ ಮೂಡಲಪಾಯ ಯಕ್ಷಗಾನ ಕಲಾವಿದರು, ತಲಕಾಡು, ಟಿ.ನರಸೀಪುರ ತಾಲ್ಲೂಕು,ಮೈಸೂರು ಜಿಲ್ಲೆ, ಇವರಿಗೆ ಪೂಜ್ಯ ಸ್ವಾಮೀಜಿಯವರು ನೀಡಿ ಗೌರವಿಸಿದರು.
ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹಾಗೂ ಶ್ರೀ ಕ್ಷೇತ್ರದ ಶಾಖಾ ಮಠದ ಪೂಜ್ಯ ಸ್ವಾಮೀಜಿಯವರು ಹಾಗೂ ಜಾನಪದ ಕಲಾವಿದರು, ಶ್ರಿ ಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


