ನಾಗಮಂಗಲ. ನಾಗಮಂಗಲ ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಆರಂಭಗೊಂಡಿರುವ ಸೈಲೆಜ್ ಯಂತ್ರವನ್ನು ತೆರವುಗೊಳಿಸಿ ಗ್ರಾಮದ ಜನತೆಯ ಆರೋಗ್ಯ ಕಾಪಾಡಬೇಕೆಂದು ಸದರಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಆಗ್ರಹವಾಗಿದೆ.
ನಾಗಮಂಗಲ ತಾಲೂಕಿನ ಪಾಲಾಗ್ರಹಾರ ಗ್ರಾಮ ಪಂಚಾಯಿತಿಗೆ ಸೇರಿರುವ ಕೋಟೆಬೆಟ್ಟ ಗ್ರಾಮದ ಕೆ.ಟಿ ರಾಮಚಂದ್ರ ರವರಿಗೆ ಸೇರಿರುವ ಸೈಲೆಜ್ ಯಂತ್ರ ಆರಂಭ ಮಾಡಿದ್ದು ಇದರಿಂದ ವಿಷಪೂರಿತವಾಗಿ ಹೊಗೆ ಅಕ್ಕಪಕ್ಕದ ಕುಟುಂಬಗಳಿಗೆ ಅತಿ ಹೆಚ್ಚು ಶಬ್ದದ ಒತ್ತಡ ಇರುವುದರಿಂದ ಈ ಯಂತ್ರವನ್ನು ತೆರವುಗೊಳಿಸಿ ಗ್ರಾಮಸ್ಥರ ಹಾಗೂ ಪರಿಸರ ಕಾಪಾಡುವಂತೆ ಸಂಬಂಧಪಟ್ಟ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಮಾಡಿದ್ದಾರೆ.
