ನಾಗಮಂಗಲ.ಡಿ:-8 ಮಂಡ್ಯದಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ನಾಗಮಂಗಲದ ಸಾವಯುವ ಕೃಷಿ ಉತ್ಪನ್ನ ಮಳಿಗೆ ಉತ್ಪನ್ನಗಳ ಬೇಡಿಕೆಗೆ ಸೃಷ್ಟಿಕೊಂಡ ನಮ್ಮ ತಾಲೂಕಿನ ಮಳಿಗೆಯಾಗಿತ್ತು.
ಮಂಡ್ಯದ ವಿಸಿ ಫಾರಂ ನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಅತ್ಯಾಕರ್ಷಕವಾಗಿ ತನ್ನದೇ ಆದ ಬೆಲೆಯನ್ನು ಸೃಷ್ಟಿಸಿಕೊಂಡಿದ್ದು ನಾಗಮಂಗಲದ ತಾಲೂಕು ಸಾವಯವ ರೈತರ ಸಂಘದ ಉತ್ಪನ್ನಗಳು. ನಾಗಮಂಗಲ ತಾಲೂಕಿನಲ್ಲಿರುವಂತಹ ರೈತರನ್ನು ಸಾವಯವ ಕೃಷಿಗೆ ಕೊಂಡೊಯುವಂತ ಇಲ್ಲಿನ ಸಾವಯವ ಕೃಷಿಕರು ಮಾಡಿಕೊಂಡಂತಹ ಒಂದು ಸಂಘಟನೆಯಿಂದಾಗಿ ರೈತರನ್ನು ಸಾವಯವ ಕೃಷಿಗೆ ತೊಡಗಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಪ್ರಯತ್ನದ ಪಲವಾಗಿ ನೂರಾರು ರೈತರು ಸಾವಯವ ಕೃಷಿಯನ್ನೇ ತನ್ನ ಜೀವನದ ಬೇಸಾಯ ವೃತ್ತಿಯಾಗಿ ಮಾಡಿಕೊಳ್ಳುವ ಪಣವನ್ನು ತೊಟ್ಟಿರುತ್ತಾರೆ ರಾಸಾಯನಿಕ ಗೊಬ್ಬರಗಳಿಂದ ವಿಷ ಪೂರಿತವಾದ ಆಹಾರ ಪದಾರ್ಥಗಳನ್ನು ಬಳಸಿದ್ದ ಜನಗಳಿಗೆ ಸಾವಯುವ ಎಂದ ತಕ್ಷಣ ಕಿವಿ ಚುರುಕಾಗಿ ಇತ್ತ ತಮ್ಮ ಗಮನವನ್ನು ನೀಡುವ ಪ್ರಯತ್ನವನ್ನು ಮಾಡಿದರು.
ರೈತರ ಸಂಘದಲ್ಲಿ ನಾಟಿ ಹಸುವಿನ ತುಪ್ಪ, ಪರಂಗಿ ಹಣ್ಣು, ಬಾಳೆಹಣ್ಣು,ವಿವಿಧ ತರಕಾರಿಗಳು, ಅಣಬೆ ಹಾಗೂ ಹಣ್ಣು ಹಂಪಾಲಗಳನ್ನು ಬೆಳೆಯುವುದರ ಮೂಲಕ ಈ ಪದಾರ್ಥಗಳನ್ನು ನೇರವಾಗಿ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನು ಈ ಒಕ್ಕೂಟ ಮಾಡಿದೆ.
ವಿಸಿ ಫಾರಂ ನಲ್ಲಿ ನಡೆದಂತಹ ಕೃಷಿ ಮೇಳದಲ್ಲಿ ಈ ಮಳಿಗೆಯು ಒಂದು ವಿಶೇಷವಾಗಿ ಆಕರ್ಷಕವಾಗಿತ್ತು.
ಜನಗಳೆಲ್ಲರಿಗೆ ಇಲ್ಲಿನ ಉತ್ಪನ್ನಗಳ ಬೇಡಿಕೆ ಇದ್ದು ಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.
ಜನಸಾಮಾನ್ಯರ ಕಣ್ಣಿಗೆ ಕಾಣದಂತಹ ಸೋರೆ, ಕುಂಬಳಕಾಯಿ ಹಾಗೆ ಇತರ ಕಾಯಿಪಲ್ಯಗಳು ಅತ್ಯಾಕರ್ಷಕವಾಗಿದ್ದವು ಅವುಗಳನ್ನು ಕಂಡ ಜನಗಳು ಅವುಗಳನ್ನು ಕೊಳ್ಳುವ ಮುಗಿಬಿದ್ದಿ ಎಲ್ಲರೂ ತಮ್ಮ ಮನೆಗಳಲ್ಲಿ ಬೆಳೆಸಲು ಬೀಜಗಳು ಬೇಕೆಂದು ಈ ಉತ್ಪನ್ನಗಳ ಬೀಜಗಳನ್ನು ಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಘಟನೆ ತಮ್ಮದೇ ಆದ ವಸ್ತ್ರಗಳನ್ನು ಧರಿಸುವುದರ ಮೂಲಕ ಅತ್ಯಾಕರ್ಷಕವಾಗಿ ಗ್ರಾಹಕರನು ಆಕರ್ಷಿಸುತ್ತಿದ್ದರು.
ನಾಗಮಂಗಲ ತಾಲೂಕು ಸಾವಯವ ರೈತರ ಸಂಘದ ಅಧ್ಯಕ್ಷರಾದ ಸಂತೋಷ್ ರವರು, ಕಾರ್ಯದರ್ಶಿ ವಿರೂಪಾಕ್ಷಪ್ಪ, ಉಪಾಧ್ಯಕ್ಷರು ಶಿವಣ್ಣ, ಬ್ರಹ್ಮದೇವರಹಳ್ಳಿ ಲೋಕೇಸ್ವಾಮಿ, ಹಾಗೂ ಎಲ್ಲಾ ಪದಾಧಿಕಾರಿಗಳು ನಿರಂತರವಾಗಿ ತೊಡಗಿ ಜನರಿಗೆ ಸಾವಯವ ಕೃಷಿ ಮಾಹಿತಿಗಳನ್ನು ನೀಡುತ್ತಿದ್ದರು.
