Ticker

6/recent/ticker-posts

*ಕೆ.ಎಂ ದೊಡ್ಡಿ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಠಾಣೆಯಲ್ಲಿ ದಲಿತ ಕುಂದುಕೊರತೆಸಭೆ*

ಕೆ.ಎಂ ದೊಡ್ಡಿ :-ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಆದೇಶದಂತೆ ಪೊಲೀಸ್ ಠಾಣೆಯಲ್ಲಿ ದಲಿತ ಕುಂದುಕೊರತೆ ಸಭೆಯನ್ನು ಆಯೋಜಿಸಿ ದಲಿತ ಸಮುದಾಯದಗಳ ಕುಂದುಕೊರತೆಗಳನ್ನು ಅಲಿಸುವ ನಿಟ್ಟಿನಲ್ಲಿ  ದಲಿತರ ಕುಂದುಕೊರತೆ ಸಭೆಯನ್ನು ಆಯೋಜಿಸಿ ಅವರ ಹಿತ ಕಾಯಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ  ದಲಿತ ಸಮುದಾಯ ಸಮಸ್ಯೆಗಳ ಆಲಿಸುವ ನಿಟ್ಟಿನಲ್ಲಿ ಠಾಣೆಯ ಗ್ರಾಮಗಳ  ಬಿಟ್ ಪೊಲೀಸ್ ಹಾಗೂ ಮಹಿಳಾ ಸಿಬ್ಬಂದಿಗಳ  ಜೊತೆಗೂಡಿ ಪ್ರತಿ ಗ್ರಾಮಗಳ ದಲಿತ ಕಾಲೊನಿಗಳಲ್ಲಿ ಕುಂದು ಕೊರತೆ ಸಭೆ ಆಯೋಜಿಸಿ ಸಮುದಾಯದವರ ಜೊತೆ  ಮುಕ್ತವಾಗಿ ಚರ್ಚಿಸಿ  ಅವರ  ದೂರಗಳನ್ನು ಪಡೆದು ಕಾನೂನು  ಚೌಕಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ತಿಳಿಸಿದರು.

ಕೆ.ಎಂ ದೊಡ್ಡಿಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ರವರು ದಲಿತರ ಕೊರತೆಯ ಸಭೆಯನ್ನು ಆಯೋಜಿಸಿ, ಕಳೆದ ಸಾಲಿನ ಸಭೆಯಲ್ಲಿ  ಚರ್ಚಿತವಾಗಿರುವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು
ಮದ್ದೂರು ತಾಲೋಕು ಎಸ್ಸಿ ಎಸ್ಟಿ ಜಾಗೃತಿ ಸಮಿತಿಯ  ಸದಸ್ಯರಾದ ಕಾಡುಕೊತ್ತನಹಳ್ಳಿ ಗ್ರಾಮದ ಚಿದಂಬರ ಮೂರ್ತಿ ಮಾತನಾಡಿ ಕಳೆದ ಸಾಲಿನಲ್ಲಿ ಠಾಣಾ ವ್ಯಾಪ್ತಿಯಲ್ಲಿನ ಅಟ್ರಾಸಿಟಿ ಪ್ರಕರಣಗಳ ಬಗ್ಗೆ ನಿರ್ದಿಷ್ಟವಾದ ಮಾಹಿತಿಯ ಕೋರಿ,ಪರಿಪಾಲನ ವರದಿ ನೀಡುವಂತೆ ಸೂಚಿಸಿದರು.

ಪರಿಶಿಷ್ಟ ಕಾಲೋನಿಗಳಲ್ಲಿ ಈ  ಬಿಟ್ ವ್ಯವಸ್ಥೆ ಬಲಗೊಳಿಸಬೇಕು ಗ್ರಾಮೀಣ ಭಾಗಗಳಲ್ಲಿ ದೇವಲಾಯಗಳಿಗೆ ಹಾಗೂ ಹೊಟೇಲ್ ಗಳಲಿ ದಲಿತರಿಗೆ ಮುಕ್ತ ಪ್ರವೇಶ ಇಲ್ಲದೆ ಅಸ್ಪೃಶ್ಯತೆ ಆಚರಣೆ ಕಂಡು ಬಂದಿದ್ದು ಅಸ್ಪೃಶ್ಯತೆ ಆಚರಣೆ ಮಾಡದಂತೆ ನಿಗ ವಹಿಸಬೇಕೆಂದು ಸಲಹೆ ನೀಡಿದರು. ದಲಿತ ಕೇರಿಗಳಲ್ಲಿ ಅನಧಿಕೃತ ಮದ್ಯಪಾನ, ಮಾರಾಟವಾಗುತ್ತಿದ್ದು ಅಬಕಾರಿ ಇಲಾಖೆಯ ಸಹಕಾರದೊಂದಿಗೆ ದಾಳಿ ಮಾಡಿ ಸೂಕ್ತ  ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ನಂತರ ಪೊಲೀಸ್ ಇನ್ಸ್ಪೆಕ್ಟರ್  ಅನಿಲ್ ಕುಮಾರ್ ರವರು ರವರು ದಲಿತ ಮುಖಂಡರ ಅಹವಾಲುಗಳನ್ನು ಸ್ವೀಕರಿಸಿ, ಕಾನೂನು ಚೌಕಟ್ಟಿನಲ್ಲಿ ದೂರಗಳ ಬಗ್ಗೆ  ಕ್ರಮವಹಿಸಲಾಗುವುದು ಎಂದು ತಿಳಿಸಿದರು .

ನಂತರ ಪೊಲೀಸ್ ಇಲಾಖೆಯ ERSS ವಾಹನಗಳ ಬಗ್ಗೆ ಹಾಗೂ ಸಂಚಾರ ನಿಯಮಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮನೆ ಮನೆಗೆ ಪೊಲೀಸ್  ಕಾರ್ಯಕ್ರಮ  ಹಾಗೂ ಅಪರಾಧ ತಡೆಗಟ್ಟುವ  ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ  ವಿಧಾನಗಳ  ಸವಿಸ್ತಾರವಾಗಿ ತಿಳಿಸಿದರು.

 ಇದೆ ಸಂದರ್ಭದಲ್ಲಿ ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕೆ ಕಬ್ಬಾಳಯ್ಯ, ಕರಡಕೆರೆ ಯೋಗೇಶ್ ಚಿಕ್ಕರಸಿನಕೆರೆ ಮೂರ್ತಿ,ಟಿಬಿಹಳ್ಳಿ ಸಂತೋಷ್,ಗುಡಿಗೆರೆ ಪ್ರಸಾದ್ ,ಬಸವರಾಜು ,ಸತೀಶ್,ಪೂಜಾರಿ ಸಿದ್ದರಾಜು , ಗ್ರಾಮ ಪಂಚಾಯಿತಿ ಸದಸ್ಯರಾದ ಮಾದರಹಳ್ಳಿ ದೇವಿರಮ್ಮ,ಪ್ರಸಾದ್, ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿಗಳು  ಉಪಸ್ಥಿತರಿದ್ದರು..

 *ವರಧಿ :-.ಸಂತೋಷ್ ಟಿಬಿ*