Ticker

6/recent/ticker-posts

ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನದನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಆಧುನಿಕ ಯುಗದ ಮಹಾಚೇತನ

ಕೊಳ್ಳೇಗಾಲ:ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವಂತಹ  ಸಂವಿಧಾನದನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಆಧುನಿಕ ಯುಗದ  ಮಹಾಚೇತನ  ವಿಶ್ವ ಕಂಡಂತಹ ಮಹಾ ಮಾನವತವಾದಿ ಎಂದು ಕೆಎಸ್ಆರ್ಟಿಸಿ  ಕೊಳ್ಳೇಗಾಲ ಘಟಕ ವ್ಯವಸ್ಥಾಪಕರಾದ  ಭೋಗಾನಾಯಕ್ ಹೇಳಿದರು.

ಪಟ್ಟಣದಲ್ಲಿರುವ ಕೆ ಎಸ್ ಆರ್ ಟಿ ಸಿ ಡಿಪೋ ಕಚೇರಿ ಆವರಣದಲ್ಲಿ ಇಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯ ಅಂಗವಾಗಿ, ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದರು.

ಬಳಿಕ ಡಿಪೋ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಪುಷ್ಪಾರ್ಚನೆ ಮಾಡಿ, ಮೊಂಬತ್ತಿ ಹಚ್ಚಿ  ಮೌನಾಚಾರಣೆ ಮಾಡಿದರು.

ಬಳಿಕ ಡಿಪೋ ವ್ಯವಸ್ಥಾಪಕ ಭೋಗಾನಾಯಕ್ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್  ಅವರು ಕಡು ಬಡತನದ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಿಂದ ಸಾಕಷ್ಟು ನೋವು ಅವಮಾನಗಳನ್ನು ಅನುಭವಿಸಿ, ಸಾಕಷ್ಟು ಕಷ್ಟಗಳನ್ನು ಎದುರಿಸಿ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪದವಿಗಳನ್ನು ಪಡೆದು ಶೈಕ್ಷಣಿಕ ವಲಯದಲ್ಲಿ ಸಾಧನೆ ಮಾಡಿ  'ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಎಂಬ ಸಂದೇಶದಂತೆ ದೇಶಕ್ಕೆ ಪವಿತ್ರ ಗ್ರಂಥವಾದ  ಸಂವಿಧಾನವನ್ನು ರಚಿಸಿದರು.

ಸಂವಿಧಾನದಲ್ಲಿ ಎಲ್ಲಾ ವರ್ಗದ ಎಲ್ಲಾ ಧರ್ಮದ ಜನರಿಗೆ ಸಮಾನ ಹಕ್ಕುಗಳನ್ನು ನೀಡಿ ವಿಶ್ವ ಸಂದೇಶ ಸಾರಿದವರು. ಬೇರೆ ದೇಶದವರೆಲ್ಲ  ಅಂಬೇಡ್ಕರ್ ಅವರನ್ನು ವಿಶ್ವಕಂಡಂತಹ ಬಹುದೊಡ್ಡ ಆರ್ಥಿಕ ತಜ್ಞ  ಎಂದು ಬಣ್ಣಿಸುತ್ತಾರೆ. ಮಹಾನ್ ವ್ಯಕ್ತಿ ಭೌತಿಕವಾಗಿ  ನಮ್ಮ ಜೊತೆ ಇಲ್ಲದಿರಬಹುದು. ಸೂರ್ಯ ಚಂದ್ರ ಇರುವವರೆಗೂ  ಅಂಬೇಡ್ಕರ್ ರವರು ದೇಶದ ಪ್ರತಿಯೊಬ್ಬ ಮನಸ್ಸಿನಲ್ಲಿ ನೆಲೆಯಾಗಿರುತ್ತಾರೆ.

 ಅಂಬೇಡ್ಕರ್ ರವರು  ಅಗಲಿ 69 ವರ್ಷಗಳಾಗಿದ್ದು, ಅವರ 69ನೇ ಪರಿನಿರ್ವಾಣ ದಿನಾಚರಣೆಯನ್ನು  ನಮ್ಮ ಕೆಎಸ್ಆರ್ಟಿಸಿ ಡಿಪೋದಲ್ಲಿನ   ಯಾರಿಗಳು ಕಾರ್ಮಿಕ ವರ್ಗದವರು, ಮತ್ತು ಇಲಾಖೆಯ ಸಿಬ್ಬಂದಿವರ್ಗುದವರು ಜೊತೆಗೂಡಿ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದರು.

ಈ ವೇಳೆ ಕಾರ್ಯ ಅಧಿಕ್ಷಕ ಉಮೇಶ್, ಪಾರು ಪತ್ತೆದಾರ ಪರಮೇಶ್,ಸಂಚಾರಿ ನಿರೀಕ್ಷಕ  ಹಿತೇಶ್, ರಂಗಸ್ವಾಮಿ, ಚಂದ್ರಶೇಖರ್, ಗಂಗರಾಜು ಮೂರ್ತಿ, ಪರಮೇಶ್ವರ್, ನಿರಂಜನ್, ಸೋಮ, ಸಂಪತ್, ಸೌಮ್ಯ, ವಾಣಿಶ್ರೀ ಮತ್ತು ಆಡಳಿತ, ಚಾಲಕ, ನಿರ್ವಾಹಕ, ಭದ್ರತಾ  ಸಿಬ್ಬಂದಿ, ತ್ರಿಕ ಸಿಬ್ಬಂದಿ ವರ್ಗದವರು ಹಾಜರಿದ್ದರು.